ಕಲಬುರಗಿ: ಯುವತಿಯೊಬ್ಬಳ ಶವ ಕಮಲಾಪುರ(Kamalapura) ತಾಲೂಕಿನ ಕುರಿಕೋಟಾ ಸೇತುವೆ(Kurikota Bridge) ಬಳಿ ಪತ್ತೆಯಾಗಿದೆ.ಕಮಲಾಪುರ ತಾಲ್ಲೂಕಿನ ನಾವದಗಿ ಗ್ರಾಮದ ಸೃಷ್ಟಿ ಮಾರುತಿ (21) ಡಿಗ್ರಿ ಐದನೇ ಸೆಮಿಸ್ಟರ್ ಓದುತ್ತಿದ್ದಳು. ಡಿ.13 ರಂದು ಕಾಲೇಜಿಗೆ ಹೋಗಿದ್ದವಳು ವಾಪಸ್‌ ಮನೆಗೆ ಬಂದಿರಲಿಲ್ಲ. ಇದನ್ನೂ ಓದಿ: ಬಿನ್ ಲಾಡೆನ್ ಸತ್ತಿದ್ದರೂ ಗುಜರಾತ್‌ನ ಕಟುಕ ಜೀವಂತವಾಗಿದ್ದಾನೆ: ಮೋದಿ ವಿರುದ್ಧ ಪಾಕ್ ವಿದೇಶಾಂಗ ಸಚಿವ ವಿವಾದಿತ ಹೇಳಿಕೆಕುರಿಕೋಟಾ ಸೇತುವೆ ಬಳಿ ಶುಕ್ರವಾರ ಸೃಷ್ಟಿ ಶವ ಸಿಕ್ಕಿದೆ. ಈ ಕುರಿತು ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕುಟುಂಬಸ್ಥರು ಯಾರ ಬಗ್ಗೆಯೂ ಅನುಮಾನ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಸೃಷ್ಟಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸೃಷ್ಟಿ ಸಾವಿಗೆ ನಿಖರ ಕಾರಣ ಏನು ಎನ್ನುವುದು ತಿಳಿದು ಬರಲಿದೆ.
Sign in to your account
Username or Email Address


Password

 Remember Me


