ಬೆಂಗಳೂರು: ಜನರೇ ಎಚ್ಚರ, ಎಚ್ಚರ. ಬೆಂಗಳೂರಿನಲ್ಲಿ (Bengaluru) ಬೀಡು ಬಿಟ್ಟಿದ್ದಾರೆ ನಕಲಿ ವೈದ್ಯರು. ರಾಜ್ ಗೋಪಾಲ್ ನಗರ ನಕಲಿ ವೈದ್ಯರ ಘಟನೆ ಮಾಸುವ ಮುನ್ನವೇ ಮತ್ತೊಂದು ಆತಂಕಕಾರಿ ವಿಚಾರ ಬಯಲಾಗಿದೆ. ನಗರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಕಲಿ ವೈದ್ಯರು (Fake Doctors) ಇರೋದಾಗಿ ಐಎಂಎ, ಫನಾ (ಭಾರತೀಯ ಮೆಡಿಕಲ್ ಅಸೋಸಿಯೇಶನ್ ಮತ್ತು ಖಾಸಗಿ ಆಸ್ಪತ್ರೆಗಳ ಒಕ್ಕೂಟ) ಸರ್ವೆಯಲ್ಲಿ ಬಯಲಾಗಿದೆ.ಬೆಂಗಳೂರಿನಲ್ಲಿ ಕಳೆದೆರಡು ದಿನಗಳ ಹಿಂದಷ್ಟೇ ನಕಲಿ ವೈದ್ಯನ ಚಿಕಿತ್ಸೆಯಿಂದಾಗಿ ಹೆಗ್ಗನಹಳ್ಳಿಯ ಜ್ಯೋತಿ ಎಂಬಾಕೆ ಕಾಲು ಕಳೆದುಕೊಂಡು ನರಕಯಾತನೆ ಅನುಭವಿಸಿದ ಬಗ್ಗೆ ವಿಸ್ತೃತ ವರದಿ ಮಾಡಿದ್ದೆವು. ಈ ಘಟನೆ ಮಾಸುವ ಮುನ್ನವೇ ಭಾರತೀಯ ಮೆಡಿಕಲ್ ಅಸೋಸಿಯೇಶನ್ ಮತ್ತು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಆತಂಕಕಾರಿ ವಿಚಾರ ಬಿಚ್ಚಿಟ್ಟಿದೆ. ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಮಚ್ಚು ತೋರಿಸಿದ ಪ್ರಕರಣ – ದಂಪತಿ ವಿರುದ್ಧ ರೌಡಿಶೀಟರ್ ಕೇಸ್ ಹಾಕಿ ಅರೆಸ್ಟ್ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಕಲಿ ವೈದ್ಯರು ಇರೋದಾಗಿ ಐಎಂಎ, ಫನಾ ಅಭಿಪ್ರಾಯ ವ್ಯಕ್ತಪಡಿಸಿವೆ. ನಗರದಾದ್ಯಂತ ಐಎಂಎ ಮತ್ತು ಫನಾ ನಕಲಿ ವೈದ್ಯರ ಬಗ್ಗೆ ಸರ್ವೆ ನಡೆಸ್ತಿದ್ದು, ಅದರಲ್ಲಿ ಸರ್ಟಿಫಿಕೇಟ್ ಇಲ್ಲದೇ, ರಿಜಿಸ್ಟ್ರೇಷನ್ ಮಾಡಿಸಿಕೊಳ್ಳದೇ ವೈದ್ಯ ಪದವಿ, ತರಬೇತಿಯನ್ನೂ ಪಡೆಯದೇ ಕ್ಲಿನಿಕ್‍ಗಳನ್ನು ತೆರೆದು ಜನರಿಗೆ ಚಿಕಿತ್ಸೆ ನೀಡ್ತಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ಕೆಪಿಎಂ ಆಕ್ಟ್ ಪ್ರಕಾರ ಕ್ರಮ ಕೈಗೊಳ್ಳಲು ಆಗ್ರಹಿಸ್ತಿದ್ದಾರೆ. ಇದನ್ನೂ ಓದಿ: ಕುರಿಕೋಟಾ ಸೇತುವೆ ಬಳಿ ಯುವತಿ ಶವ ಪತ್ತೆ – ಆತ್ಮಹತ್ಯೆ ಶಂಕೆ?ಇಂತಹ ನಕಲಿ ವೈದ್ಯರಿಂದ ಚಿಕಿತ್ಸೆ ಪಡೆದು ಅನಾರೋಗ್ಯಕ್ಕೀಡಾಗುತ್ತಿರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಿಗೆ ಇಂತಹ ರೋಗಿಗಳು ಬರ್ತಿದ್ದು, ಸಮಸ್ಯೆಗಳು ಉಲ್ಬಣಿಸುತ್ತಿದೆ. ಫನಾಗೆ ಇಂತಹ ದೂರುಗಳು ಹೆಚ್ಚು ಬರ್ತಿವೆಯಂತೆ. ಸರ್ಕಾರ ಕೂಡ ಇಂತಹವರ ವಿರುದ್ಧ ಕ್ರಮವಹಿಸಲು ಹಿಂದೇಟು ಹಾಕ್ತಿದೆ. ಸರ್ಕಾರ ಇಂತಹವರ ಪರ ನಿಲ್ಲಬಾರದು ಸೂಕ್ತ ಕಾನೂನು ಕ್ರಮವಹಿಸಬೇಕು. ಆರೋಗ್ಯ ಆಯುಕ್ತರನ್ನು ಭೇಟಿ ಮಾಡಿ ಇದರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಫನಾ ಸ್ಪಷ್ಟಪಡಿಸಿದೆ.Live Tv
[brid partner=56869869 player=32851 video=960834 autoplay=true]
Sign in to your account
Username or Email Address


Password

 Remember Me


