ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಈಗ ಮೂರು ರಾಜಕೀಯ ಪಕ್ಷಗಳ ಕಣ್ಣು ಹಳೇ ಮೈಸೂರು(Old Mysuru) ಭಾಗದ ಮೇಲೆ ಬಿದ್ದಿದೆ.ಜೆಡಿಎಸ್-ಕಾಂಗ್ರೆಸ್(JDS – Congress) ಪ್ರಬಲವಾಗಿರುವಾಗಿರುವ ಇಲ್ಲಿ ತಳವೂರಲು ಬಿಜೆಪಿ(BJP) ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಒಕ್ಕಲಿಗರ ಮತಗಳ ಕಣ್ಣಿಟ್ಟು 3 ಪಕ್ಷ ನಾನಾ ರಣತಂತ್ರ ಹೆಣಿಯುತ್ತಿವೆ. ಅದರಲ್ಲೂ ಜೆಡಿಎಸ್ ಮತ್ತು ಬಿಜೆಪಿ ಭಾವನಾತ್ಮಕ ದಾಳಗಳನ್ನು ಉರುಳಿಸುತ್ತಿರುವುದು ಕಾಂಗ್ರೆಸ್ ತಲೆಬಿಸಿಗೆ ಕಾರಣವಾಗಿದೆ.ಗುರುವಾರ ರಾತ್ರಿ ಬೆಂಗಳೂರಲ್ಲಿ ಸಭೆ ಸೇರಿದ ಕಾಂಗ್ರೆಸ್ ಪಕ್ಷದ ಒಕ್ಕಲಿಗ ನಾಯಕರು ಈ ಬಗ್ಗೆಯೇ ಚರ್ಚೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ದೇವೇಗೌಡರ ಟಾರ್ಗೆಟ್ ಬೇಡ ಎಂದು ಡಿಕೆ ಶಿವಕುಮಾರ್‌(DK Shivakumar) ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ನಟಿ ರಾಕುಲ್ ಪ್ರೀತ್ ಸಿಂಗ್‌ಗೆ ಮತ್ತೆ ಸಂಕಷ್ಟಬಿಜೆಪಿಯವರು ಹಳೆ ಮೈಸೂರು ಭಾಗದಲ್ಲಿ ಟಿಪ್ಪು ವಿರೋಧಿಸುವುದು, ಹನುಮ ಜಯಂತಿ ಆಯೋಜನೆ ಮಾಡುತ್ತಾ ಹಿಂದುತ್ವದ ಅಜೆಂಡಾವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಈ ಅಜೆಂಡಾವನ್ನು ನಾವು ಜಾಣತನದಿಂದ ಹತ್ತಿಕ್ಕಬೇಕು ಎಂದು ಡಿಕೆಶಿ ಕರೆ ನೀಡಿದ್ದಾರೆ.ಇದೇ ವೇಳೆ ಈಗ ಸಿಎಂ ವಿಚಾರ ಚರ್ಚೆ ಮಾಡಬೇಡಿ. ಆದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಒಕ್ಕಲಿಗ ನಾಯಕರಿಗೆ ಡಿಕೆಶಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
Sign in to your account
Username or Email Address


Password

 Remember Me


