ಬೆಳಗಾವಿ: ಯಮಕನಮರಡಿ ಕ್ಷೇತ್ರದ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಕ್ಷೇತ್ರದಲ್ಲಿ ಹಿಂದೂ ಜಾಗೃತಿ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದ್ದು, ಇಂದು ಜಾಗೋ ಹಿಂದೂ ಬೃಹತ್ ಸಮಾವೇಶ ನಡೆಯುತ್ತಿದೆ.ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಕಡೋಲಿ ಗ್ರಾಮದ ಶಿವಾಜಿ ಹೈಸ್ಕೂಲ್‍ನ ಮೈದಾನದಲ್ಲಿ ಸಂಜೆ 7ಗಂಟೆಗೆ ಜಾಗೋ ಹಿಂದೂ ಬೃಹತ್ ಸಮಾವೇಶ ನಡೆಯಲಿದೆ. ಯಮಕನಮರಡಿ ಕ್ಷೇತ್ರದಲ್ಲಿ ನಾನು ಹಿಂದೂ ಸಮಾವೇಶ ಆದ ಮೇಲೆ ಈಗ ಜಾಗೋ ಹಿಂದೂ ಸಮಾವೇಶ ನಡೆಯುತ್ತಿದೆ.ಮೊದಲು ಯಮಕನಮರಡಿಯಲ್ಲಿ ನಾನು ಹಿಂದೂ ಸಮಾವೇಶ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾಡಿದ್ದರು. ಇದೀಗ ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ, ಮಹಾರಾಷ್ಟ್ರದ ಮರಾಠಿ ಭಾಷಿಕ ವಾಗ್ಮಿ ಧನಂಜಯ ಭಾಯಿ ದೇಸಾಯಿ ನೇತೃತ್ವದಲ್ಲಿ ಸಮಾವೇಶ ನಡೆಯುತ್ತಿದ್ದು, ಮರಾಠಿ ಭಾಷಿಕರ ಗಮನದಲ್ಲಿಟ್ಟುಕೊಂಡು ಜಾಗೋ ಹಿಂದೂ ಬೃಹತ್ ಸಮಾವೇಶ ಮಾಡಲಾಗುತ್ತಿದೆ. ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಕಡೋಲಿ, ಕಾಕತಿ ಜಿ.ಪಂ ಕ್ಷೇತ್ರದಲ್ಲಿ ಮರಾಠಿ ಭಾಷಿಕರ ಪ್ರಭಾವ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಿಜೆಪಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಸೇರಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ:  ನಾವು ಪ್ರಧಾನಿ ಮೋದಿ ಮಾತನ್ನು ಒಪ್ಪುತ್ತೇವೆ – ಉಕ್ರೇನ್ ಯುದ್ಧದ ಬಗ್ಗೆ ಭಾರತದ ನಿಲುವಿಗೆ ಯುಎಸ್ ಸಾಥ್ಹಿಂದೂ ಪದದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿವಾದಿತ ಹೇಳಿಕೆ ನೀಡಿದ್ದರು. ಬಳಿಕ ರಾಜ್ಯ ಸೇರಿ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಇದರಿಂದ ಸತೀಶ್ ತಮ್ಮ ಹಿಂದೂ ಪದದ ಹೇಳಿಕೆಯನ್ನು ವಾಪಸ್ ಪಡೆದಿದ್ದರು. ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ ವಾಪಸ್ ಪಡೆದರೂ ನಿಲ್ಲದ ಹಿಂದೂ ವರ್ಡ್ ವಾರ್ ಮುಂದುವರಿದಿದೆ. ಈ ಬಾರಿ ಚುನಾವಣೆಯಲ್ಲಿ ಶತಾಯ ಗತಾಯ ಸತೀಶ್ ಜಾರಕಿಹೊಳಿ ಸೋಲಿಸಲು ಬಿಜೆಪಿ ಪ್ಲ್ಯಾನ್ ಮಾಡಿದ್ದು, ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯಿಂದ ಹಿಂದೂ ಅಸ್ತ್ರ ಪ್ರಯೋಗಿಸಿದ್ದಾರೆ. ಇದನ್ನೂ ಓದಿ: ಹನಿಮೂನ್‌ನಿಂದ ಬರುವಾಗ ಟೆಕ್ಕಿ ದಂಪತಿಗೆ ಅಪಘಾತ – ಪತಿಯನ್ನು ಕಳೆದುಕೊಂಡ ನವವಿವಾಹಿತೆ
Sign in to your account
Username or Email Address


Password

 Remember Me


