ಬಿಗ್ ಬಾಸ್ ಮನೆಯ(Bigg Boss House) ಆಟ 12 ವಾರಗಳು ಪೂರ್ಣಗೊಂಡಿದೆ. ಫಿನಾಲೆ ಇನ್ನೂ ಕೆಲವೇ ದಿನಗಳು ಬಾಕಿಯಿದ್ದು, ಈಗಾಗಲೇ ಸ್ಪರ್ಧಿಗಳಿಗೆ ಕೌಂಟ್‌ಡೌನ್ ಶುರುವಾಗಿದೆ. ಇದೀಗ ದೊಡ್ಮನೆಯಲ್ಲಿ ಅಮೂಲ್ಯ ಗೌಡ ತನಗೆ ಕಳಪೆ ಕೊಡಲು ಮನಸಾಕ್ಷಿ ಒಪ್ಪುತ್ತಿಲ್ಲ ಎಂದು ಆರ್ಯವರ್ಧನ್ ಗುರೂಜಿಗೆ (Aryavardhan Guruji) ಕಳಪೆ ಕೊಟ್ಟಿದ್ದಾರೆ. ಅಮೂಲ್ಯ (Amulya Gowda) ಮಾತಿಗೆ ಗುರೂಜಿ ಬೇಸರ ಹೊರಹಾಕಿದ್ದಾರೆ.ಪ್ರತಿವಾರವೂ ಕೂಡ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಮತ್ತು ಕಳಪೆಯನ್ನು ಸ್ಪರ್ಧಿಗಳಿಗೆ ಕೊಡಲಾಗುತ್ತದೆ. ಈ ವಾರವೂ ಕೂಡ ಉತ್ತಮ ಮತ್ತು ಕಳಪೆ ಹೆಸರನ್ನ ಸೂಚಿಸಲಾಗಿದೆ. ರೂಪೇಶ್ ಶೆಟ್ಟಿ (Roopesh Shetty) ಕ್ಯಾಪ್ಟನ್ ಆಗಿ ಮನೆಯನ್ನ ಉತ್ತಮವಾಗಿ ನಿಭಾಯಿಸಿದ್ದರು ಎಂಬ ಕಾರಣಕ್ಕೆ ರೂಪೇಶ್‌ಗೆ ಉತ್ತಮ ಕೊಡಲಾಗಿದೆ. ಹಾಗೆಯೇ ಗುರೂಜಿಗೆ ಕಳಪೆ ನೀಡಲಾಗಿದೆ. ಈ ವಾರ ಗುರೂಜಿ ಜೈಲಿಗೆ ತೆರಳಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಆಯ್ತು, ಈಗ ಕಂಗನಾ ರಣಾವತ್‌ಗೂ ಕೇಸರಿ ಕಂಟಕಈ ಕಳಪೆಗೆ ಹೆಸರನ್ನ ಸೂಚಿಸಲು ಮೊದಲು ಅಮೂಲ್ಯ ಗೌಡ (Amulya Gowda) ಹಾಗೂ ಅರುಣ್ ಸಾಗರ್ (Arun Sagar) ತಕರಾರು ಮಾಡಿದರು. ಆ ನಂತರ ಅರುಣ್ ಸಾಗರ್ ಅವರು ಗುರೂಜಿ ಹೆಸರನ್ನ ಕಳಪೆಗೆ ಸೂಚಿಸಿದರು. ಇದು ಆಟದ ಫಾರ್ಮ್ಯಾಟ್ ಕಳಪೆಗೆ ಹೆಸರು ಹೇಳಲೇಬೇಕು ಎಂದು ಎಲ್ಲರೂ ಹೇಳಿದ ಬಳಿಕ ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ. ನನಗೆ ನಾನೇ ಕಳಪೆ ಹೆಸರು ಹೇಳಲೇಬೇಕು ಎಂಬ ಕಾರಣಕ್ಕೆ ಗುರೂಜಿ ಹೆಸರು ಹೇಳುತ್ತಿದ್ದೇನೆ. ಆದರೆ, ಅವರು ನಿಜವಾಗಿಯೂ ಕಳಪೆ ಅಲ್ಲ ಎಂದು ಅಮೂಲ್ಯ ಹೇಳಿದ್ದಾರೆ.ಐ ಆಮ್ ಸಾರಿ ಬಿಗ್ ಬಾಸ್ ನಿಮಗೆ ನಾನು ಅಗೌರವ ತೋರುತ್ತಿಲ್ಲ. ಫಾರ್ಮ್ಯಾಟ್‌ಗೆ ಅಗೌರವ ತೋರುತ್ತಿಲ್ಲ. ನನಗೆ ಕಳಪೆ ಕಾಣಿಸುತ್ತಿಲ್ಲ. ಹೀಗಾಗಿ ಕಳಪೆ ಕೊಡೋದಕ್ಕೆ ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ. ನನಗೆ ಶಿಕ್ಷೆ ಕೊಟ್ಟರೆ ನಾನೂ ತೆಗೆದುಕೊಳ್ಳೋಕೆ ರೆಡಿ ಇದ್ದೇನೆ. ಇದು ರಿಯಾಲಿಟಿ, ಫಾರ್ಮ್ಯಾಟ್ ಪ್ರಕಾರ ಮಾಡಲೇಬೇಕು ಎಂದು ಇತರರು ಹೇಳಿದಾಗ, ನನಗೆ ಫೋರ್ಸ್ ಮಾಡ್ತಿದ್ದೀರಾ. ಉತ್ತಮಗೆ ಕಾರಣ ಇದೆ. ಕಳಪೆಗೆ ಕಾರಣ ಸಿಗುತ್ತಿಲ್ಲ. ನನಗೆ ನಾನೇ ಕಳಪೆ ಹೇಳಲು ಮನಸಾಕ್ಷಿ ಒಪ್ಪಿಕೊಂಡಿಲ್ಲ. ಆರ್ಯವರ್ಧನ್ ಗುರೂಜಿ ನಿಜವಾಗಿಯೂ ಕಳಪೆ ಅಲ್ಲ. ಒಂದು ಹೆಸರು ಹೇಳಬೇಕಾಗಿರೋದ್ರಿಂದ ಹೇಳ್ತಿದ್ದೇನೆ ಅಷ್ಟೇ ಎಂದರು ಅಮೂಲ್ಯ ಗೌಡ.
Sign in to your account
Username or Email Address


Password

 Remember Me


