ಸ್ಯಾಂಡಲ್‌ವುಡ್ (Sandalwood) ನಟ ಶ್ರೀಮುರಳಿಗೆ (Srimurali) 41ರ ಹುಟ್ಟುಹಬ್ಬದ(Birthday) ಸಂಭ್ರಮವಾಗಿದ್ದು, ಈ ವೇಳೆ ತಮ್ಮ ಅಭಿಮಾನಿಗಳಿಗೆ ನಟ ಕ್ಷಮೆ ಕೇಳಿದ್ದಾರೆ. ʻಬಘೀರʼ ಚಿತ್ರದ ಅಪ್‌ಡೇಟ್ ಜೊತೆ ಫ್ಯಾನ್ಸ್‌ಗೆ ಕಹಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ.ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಹೊಂಬಾಳೆ ಸಂಸ್ಥೆ(Hombale Films)  ಕೂಡ `ಬಘೀರ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ, ಶ್ರೀಮುರಳಿಗೆ ಶುಭಹಾರೈಸಿದ್ದಾರೆ. `ಬಘೀರ’ ಸಿನಿಮಾ ಶುರುವಾದ ದಿನದಿಂದ ಚಿತ್ರದ ಅಪ್‌ಡೇಟ್ ಕೊಡದೇ ಶ್ರೀಮುರಳಿ ಸೈಲೆಂಟ್ ಆಗಿ ಬಿಟ್ಟಿದ್ದರು. ಚಿತ್ರ ಶುರುವಾಗಿದೆ ಅನ್ನೋದು ಬಿಟ್ಟರೆ ಬೇರೇ ಯಾವುದೇ ಮಾಹಿತಿ ಇರಲಿಲ್ಲ.‌ ಇದೀಗ ಶ್ರೀಮುರಳಿ ಅಭಿಮಾನಿಗಳಿಗೆ ವಿಶೇಷ ಮನವಿವೊಂದನ್ನ ಮಾಡಿದ್ದಾರೆ.ಡೈರೆಕ್ಟರ್ ಸೂರಿ(Director Suri)  ನಿರ್ದೇಶನದಲ್ಲಿ `ಬಘೀರ’ (Bhageera) ಸಿನಿಮಾ 50% ರಷ್ಟು ಚಿತ್ರೀಕರಣವಾಗಿದೆ. ಶ್ರೀಮುರಳಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ (Rukmini Vasanth) ಕಾಣಿಸಿಕೊಳ್ತಿದ್ದಾರೆ. ಮುಂದಿನ ವರ್ಷ ತೆರೆಗೆ ಅಬ್ಬರಿಸಲಿದೆ. ಸದ್ಯ ಬಘೀರ ಚಿತ್ರದ ಪೋಸ್ಟರ್‌ನಲ್ಲಿ ಶ್ರೀಮುರಳಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟರ್ ಮೂಲಕ ನಟನಿಗೆ ಚಿತ್ರತಂಡ ಶುಭಹಾರೈಸಿದೆ.  A post shared by Hombale Films (@hombalefilms)ಶ್ರೀಮುರಳಿ ಪ್ರತಿ ವರ್ಷ ಜನ್ಮ ದಿನ ಆಚರಿಸಿಕೊಂಡು ಬರ್ತಿದ್ದಾರೆ. ತಮ್ಮ ಮನೆ ಅಂಗಳಕ್ಕೆ ಬರುವ ಅಭಿಮಾನಿಗಳನ್ನ ಪ್ರೀತಿಯಿಂದಲೇ ಅಪ್ಪಿಕೊಂಡ ಜನ್ಮ ದಿನ ಸೆಲೆಬ್ರೇಟ್ ಮಾಡುತ್ತಾರೆ. ಆದರೆ ಈ ವರ್ಷ ಹಾಗೆ ಆಗುತ್ತಿಲ್ಲ. ಶ್ರೀಮುರಳಿ ತಮ್ಮ ಜನ್ಮ ದಿನವನ್ನ ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡದೇ ಇರಲು ಡಿಸೈಡ್ ಮಾಡಿದ್ದಾರೆ. ಕಾರಣ ಏನು ಅನ್ನೋದನ್ನ ಸ್ವತಃ ಶ್ರೀಮುರಳಿ ಅವರೇ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಮಿತಾಭ್‌ಗೆ `ಭಾರತ ರತ್ನ ಪ್ರಶಸ್ತಿ’ ನೀಡಿ ಗೌರವಿಸಿ ಎಂದು ದೀದಿ ಮನವಿ  A post shared by SriiMurali (@sriimurali)ನನ್ನ ಪ್ರೀತಿಯ ಅಭಿಮಾನಿಗಳೆ ಕಾರಣಾಂತರಗಳಿಂದ ನನ್ನ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲಾಗುವುದಿಲ್ಲ. ನಾನು ಬೆಂಗಳೂರಿನಲ್ಲಿ ಇರುವುದಿಲ್ಲ, ಕ್ಷಮಿಸಿ! ಬೇಗ ಸಿಗುವ. ಸದಾ ನಿಮ್ಮ ಪ್ರೀತಿ ಹಾಗು ಆಶೀರ್ವಾದವನ್ನು ಬಯಸುವ ನಾ ನಿಮ್ಮ  ಶ್ರೀಮುರಳಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಶ್ರೀಮುರಳಿ ಜನ್ಮ ದಿನದಂದೇ ಹೊರಗೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಈ ವರ್ಷ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಮನೆಯಂಗಳದಲ್ಲಿ ಅಂತಹ ಸಡಗರ ಸಂಭ್ರಮ ಇರೋದಿಲ್ಲ.
Sign in to your account
Username or Email Address


Password

 Remember Me


