ಬಿಗ್ ಬಾಸ್ ಮನೆಗೆ (Bigg Boss Kannada) ಇದೀಗ ಮಿಣಿ ಮಿಣಿ ಮೀನಾಕ್ಷಿಯ ಎಂಟ್ರಿಯಾಗಿದೆ. ಮೀನಾಕ್ಷಿ ಮದುವೆಗೆ ವರ ಅನ್ವೇಷಣೆ ಜೋರಾಗಿದೆ. ದೀಪಿಕಾ ದಾಸ್ (Deepika Das) ಮತ್ತು ಅರುಣ್ ಸಾಗರ್ (Arun Sagar) ಹೊಸ ಅವತಾರದಲ್ಲಿ ಮನೆ ಮಂದಿಗೆ, ಪ್ರೇಕ್ಷಕರಿಗೆ ಕಮಾಲ್ ಮಾಡಿದ್ದಾರೆ. ಇದರ ಮಧ್ಯೆ ನನ್ನ ಕತ್ತಿನಲ್ಲಿರುವ ಚೈನ್, ಬಾಡಿಯಲ್ಲಿರುವ ಮನಸ್ಸು ನಿಮಗೆ ಕೊಡ್ತೀನಿ ಎಂದು ಗುರೂಜಿ ಮೀನಾಕ್ಷಿಗೆ ಪ್ರಪೋಸ್ ಮಾಡಿದ್ದಾರೆ.ದೊಡ್ಮನೆಯಲ್ಲಿ ಹುಂಬಲ್ಲು, ವಿಚಿತ್ರ ಜಡೆ, ಇಳಕಲ್ ಸೀರೆ, ಹಣೆಗೆ ದೊಡ್ಡ ಕುಂಕುಮ, ಕೈತುಂಬ ಬಳೆ ಹಾಕಿಕೊಂಡು ದೀಪಿಕಾ ದಾಸ್ ಅವರು ಮದುವೆಗೆ ಹುಡುಗನನ್ನು ನೋಡಲು ರೆಡಿಯಾಗಿದ್ದಾರೆ. ಸದಾ ಮಾಡರ್ನ್ ಲುಕ್‌ನಲ್ಲಿರುವ ದೀಪಿಕಾ ಅವರು ಈ ರೀತಿ ರೆಡಿ ಆಗಿದ್ದಾರೆ. ಯಾರಿಗೂ ಗುರುತು ಸಿಗದಷ್ಟು ರೀತಿಯಲ್ಲಿ ದೀಪಿಕಾ ದಾಸ್ ಅವರು ಗೆಟಪ್ ಬದಲಾಯಿಸಿಕೊಂಡು, ಅಣ್ಣ ಅರುಣ್ ಸಾಗರ್ ಜೊತೆ ವರ ಅನ್ವೇಷಣೆ ಮಾಡಿದ್ದಾರೆ.ದೀಪಿಕಾ ಅವರು ವಿಚಿತ್ರವಾಗಿ ರೆಡಿಯಾಗಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ನಾನು ಮದುವೆಯಾಗಲು ಹುಡುಗ ಬೇಕು ಎಂದು ಹೇಳಿದ ದೀಪಿಕಾ ಅವರು ರೂಪೇಶ್ ಶೆಟ್ಟಿ, ರಾಜಣ್ಣ, ಗುರೂಜಿ, ರಾಕೇಶ್ ಅಡಿಗ ಅವರಲ್ಲಿ ಯಾರು ಬೆಸ್ಟ್ ಎಂದು ತಿಳಿದುಕೊಳ್ಳಲು ಒಂದಷ್ಟು ಮಾತುಕತೆ ಮಾಡಿದ್ದಾರೆ. ಒಟ್ಟಿನಲ್ಲಿ ಮದುವೆ ನೆಪ ಇಟ್ಟುಕೊಂಡು ಅರುಣ್ ಸಾಗರ್, ದೀಪಿಕಾ ಜೋಡಿ ತಮಾಷೆಗೆ ಒಂದು ನಾಟಕ ಮಾಡಿದ್ದಾರೆ.ಧಾರವಾಡದ ಹುಡುಗಿಯಾಗಿ ಎಂಟ್ರಿ ಕೊಟ್ಟಿರುವ ದೀಪಿಕಾಗೆ ಮದುವೆಯಾಗಲು ಗಂಡು ಬೇಕಂತೆ. ದೀಪಿಕಾ ಮನೆಗೆ ಬರುವವರಿಗೆ ಅರುಣ್ ಸಾಗರ್ ಅವರು ಹುಂಬಲ್ಲು ಇರುವಂತೆ ನೋಡಿಕೊಳ್ಳುತ್ತಾರಂತೆ. ಅರುಣ್ ಅವರು ದೀಪಿಕಾಗೆ ಮಿಣಿ ಮಿಣಿ ಮೀನಾಕ್ಷಿ ಎಂದು ಹೆಸರಿಟ್ಟಿದ್ದಾರೆ. ಇನ್ನು ದೀಪಿಕಾ ಹೊಸ ಗೆಟಪ್ ನೋಡಿದವರಿಗೆ ಅವರು ದೀಪಿಕಾ ಅಂತ ನೋಡಿದಾಗ ಗೊತ್ತಾಗಿಲ್ಲ. ಇದನ್ನೂ ಓದಿ:ಮುಂದಿನ ವಾರ ವಿಚಾರಣೆಗೆ ಹಾಜರಾಗುತ್ತೇನೆ: ಪೊಲೀಸ್ ನೋಟಿಸ್ ಗೆ ದುನಿಯಾ ವಿಜಯ್ ಉತ್ತರಈ ನಾಟಕಕ್ಕೆ ರೂಪೇಶ್ ಶೆಟ್ಟಿ (Roopesh Shetty)  ಕೂಡ ಎಂಟ್ರಿ ಕೊಟ್ಟು, ಅವರು ದೊಡ್ಡ ಹೊಟ್ಟೆ ಮಾಡಿಕೊಂಡು, ಮಂಗಳೂರು ಭಾಷೆಯಲ್ಲಿ ಸಖತ್ ಡೈಲಾಗ್ ಹೊಡೆದಿದ್ದಾರೆ. ಒಟ್ಟಿನಲ್ಲಿ ದೀಪಿಕಾ, ಅರುಣ್, ರೂಪೇಶ್ ಶೆಟ್ಟಿ, ರಾಜಣ್ಣ, ರಾಕೇಶ್ ಅವರು ಈ ಡ್ರಾಮಾದಲ್ಲಿ ಭಾಗಿಯಾಗಿ ಎಲ್ಲರನ್ನು ನಕ್ಕು ನಗಿಸಿದ್ದಾರೆ. ಕತ್ತಿನಲ್ಲಿರುವ ಚೈನ್ ಕೊಟ್ಟರೆ ಗುರೂಜಿಯನ್ನು ಮದುವೆಯಾಗ್ತೀನಿ ಎಂದು ಮಿಣಿ ಮಿಣಿ ಮೀನಾಕ್ಷಿ ಹೇಳಿದಾಗ, ಗುರೂಜಿ ಅವರು, ಕತ್ತಲ್ಲಿರುವ ಚೈನ್ ಕೊಡ್ತೀನಿ, ಬಾಡಿಲಿರೋ ಮನಸು ಕೊಡ್ತೀನಿ ಎಂದಿದ್ದಾರೆ. ದೀಪಿಕಾ, ಗುರೂಜಿ ರಾಜ ರಾಜ.. ಎನ್ನುವ ಹಾಡಿಗೆ ಡ್ಯುಯೆಟ್ ಹಾಡಿದ್ದಾರೆ. ಅಂತೂ ಇಂತೂ ಈ ಸಂದರ್ಭ ಮನೆಯವರಿಗೆ, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಕೊಟ್ಟಿದೆ.
Sign in to your account
Username or Email Address


Password

 Remember Me


