ಸ್ಯಾಂಡಲ್‌ವುಡ್‌ನ (Sandalwood) ಮೊಗ್ಗಿನ ಮನಸ್ಸಿನ (Moggina Manasu) ಹುಡುಗಿ ರಾಧಿಕಾ ಪಂಡಿತ್ Radhika Pandit)  ಸದ್ಯ ಸಿನಿಮಾಗೆ ಬ್ರೇಕ್ ಕೊಟ್ಟಿದ್ದಾರೆ. ಸಂಸಾರ, ಮಕ್ಕಳ ಆರೈಕೆ ಅಂತಾ ಬ್ಯುಸಿಯಾಗಿದ್ದಾರೆ. ಇದೀಗ ಅಜ್ಜನ ಸ್ಕೂಟರ್‌ನ್ನ ಮಕ್ಕಳು ಹತ್ತಿದ್ದಾರೆ. ಅವರ ಜೊತೆ ರಾಧಿಕಾ ಕೂಡ ಸಾಥ್ ನೀಡಿದ್ದಾರೆ. ಈ ಕುರಿತು ವಿಶೇಷ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ.ಚಂದನವನದಲ್ಲಿ ಸ್ಟಾರ್ ನಟಿಯಾಗಿ ಮಿಂಚಲು ರಾಧಿಕಾ ತಂದೆ ಮತ್ತು ತಾಯಿಯ ಶ್ರಮ ಬಹಳಷ್ಟಿದೆ. ಹೀಗಿರುವಾಗ ತಂದೆಯ ಜೊತೆಗಿನ ಲೇಟೆಸ್ಟ್ ಫೋಟೋ ಹಂಚಿಕೊಂಡು ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರನನ್ನ ಅಪ್ಪ ಜಗತ್ತಿನಲ್ಲಿಯೇ ಸೇಫ್ ಡ್ರೈವರ್, ಅವರು ಡ್ರೈವ್ ಮಾಡುವಾಗ ನಾನು ನಿಜಕ್ಕೂ ನಿದ್ರಿಸಬಹುದು. ನನ್ನ ಪೂರ್ತಿ ಜೀವನದಲ್ಲಿ ಶಾಲೆ ಮತ್ತು ಕಾಲೇಜು ಲೈಫ್‌ನಲ್ಲಿ ಅಪ್ಪ ನನ್ನನ್ನು ಪಿಕಪ್ ಮತ್ತು ಡ್ರಾಪ್ ಮಾಡುತ್ತಿದ್ದರು ಎಂದು ರಾಧಿಕಾ ಬರೆದುಕೊಂಡಿದ್ದಾರೆ.  A post shared by Radhika Pandit (@iamradhikapandit)ಮಕ್ಕಳೊಂದಿಗೆ ಅಪ್ಪನ ಸ್ಕೂಟರ್ ಹತ್ತಿದ ರಾಧಿಕಾ ಪಂಡಿತ್ ಅವರ ಫೋಟೋ ಕ್ಯೂಟ್ ಆಗಿ ಮೂಡಿಬಂದಿದೆ. ವೈಟ್ ಸ್ಕೂಟಿಯಲ್ಲಿ ಐರಾ ಮುಂದೆ ನಿಂತಿದ್ದರೆ ರಾಧಿಕಾ ಮಗನನ್ನು ಹಿಡಿದುಕೊಂಡು ಹಿಂದೆ ಕುಳಿತಿದ್ದರು. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಇದೀಗ ಸದ್ದು ಮಾಡ್ತಿದೆ.
Sign in to your account
Username or Email Address


Password

 Remember Me


