ಬೆಳಗಾವಿ: ಅಧಿವೇಶನ ಮುನ್ನವೇ ಬೆಳಗಾವಿಯಲ್ಲಿ (Belagavi) ಮರಾಠಿ ಭಾಷಿಕ ಪುಂಡರು ಪುಂಡಾಟ ಪ್ರದರ್ಶನ ಮುಂದುವರಿಸಿದ್ದು, ಅಧಿವೇಶನದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕರ್ನಾಟಕ (Karnataka) ಸರ್ಕಾರಿ ವಾಹನ (Government Vehicle) ಮೇಲೆ ಕಲ್ಲು ತೂರಿ ವಿಕೃತಿ ಮೆರೆದಿದ್ದಾರೆ.ತಾಲೂಕಿನ ಹೊರವಲಯದ ಸುವರ್ಣಸೌಧದ ಬಳಿ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿದ್ದ ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಕರ್ನಾಟಕ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ಸೇರಿದ ಕರ್ನಾಟಕ ಸರ್ಕಾರ ಎದು ಬರೆದ ವಾಹನ ಅಡ್ಡಗಟ್ಟಿ, ಕಲ್ಲು ತೋರಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಕರ್ನಾಟಕ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ವಾಹನ ಚಾಲಕ ಚೇತನ್ ಎಂಬುವವರಿಗೂ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ, ರೇಷ್ಮೆ ಸೀರೆ, ಶಲ್ಯ ಸಮರ್ಪಿಸಿದ ಅಶ್ವಥ್ ನಾರಾಯಣಈ ವೇಳೆ ವಾಹನ ಚಾಲಕ ಅವರಿಂದ ತಪ್ಪಿಸಿಕೊಂಡು ತಕ್ಷಣವೇ ವಾಹನ ಚಲಾಯಿಸಿಕೊಂಡು ಪುಂಡರಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ಇದನ್ನೂ ಓದಿ:  ಬಿಜೆಪಿಗೆ 66-70 ಸ್ಥಾನ ಸಿಗುತ್ತೆ, ನಾವು ಗೆಲ್ತೀವಿ – ಡಿಕೆಶಿಯಿಂದ ಕಾಂಗ್ರೆಸ್‌ ಸಮೀಕ್ಷೆ ರಿಸಲ್ಟ್‌ ಔಟ್‌
Sign in to your account
Username or Email Address


Password

 Remember Me


