ಬಳ್ಳಾರಿ: ಯುವತಿ ಮಾತು, ಮೆಸೇಜ್, ಫೋಟೋಗೆ ಮರುಳಾಗಿ ಖಾಸಗಿ ಶಾಲೆ ಶಿಕ್ಷಕನೊಬ್ಬ ಲಕ್ಷ, ಲಕ್ಷ ಹಣದ ಜೊತೆಗೆ ಕೆಲಸವನ್ನೂ ಕಳೆದುಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.ಶಿಕ್ಷಕ ದೇವೇಂದ್ರಪ್ಪ ಹಣ ಮತ್ತು ಕೆಲಸ ಕಳೆದುಕೊಂಡ ವ್ಯಕ್ತಿ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಗ್ರಾಮವೊಂದರಲ್ಲಿ ಹೈಸ್ಕೂಲ್ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಇದ್ದ ಹೆಂಡತಿಯನ್ನು ಕಾರಣಾಂತರದಿಂದ ಬಿಟ್ಟಿದ್ದ ಈ ಶಿಕ್ಷಕ ಮ್ಯಾಟ್ರಿಮೊನಿಯಲ್ಲಿ (Matrimoney) ಕೇರಳದ ಯುವತಿ ಜೊತೆ ಗೆಳೆತನ ಬೆಳೆಸಿದ್ದಾನೆ. ಕೊರೊನಾದ ಖಾಲಿ ಸಮಯದದಲ್ಲಿ ಪರಿಚಯವಾದ ಹಿನ್ನೆಲೆ ಯುವತಿಯ ಜೊತೆ ಚಾಟಿಂಗ್ ಜೋರಾಗಿ ನಡೆಸಿದ್ದಾನೆ. ಇದನ್ನೂ ಓದಿ: ಜಿಂದಾಬಾದ್ ಗಿರಾಕಿಗಳಿಗೆ ಕಡಿವಾಣ ಹಾಕುವಂತೆ ಹೈಕಮಾಂಡ್‌ ಸೂಚನೆಎಂಬಿಬಿಎಸ್ ವ್ಯಾಸಂಗ ಮಾಡುತ್ತಿರೋದಾಗಿ ಹೇಳಿದ್ದ ಯುವತಿ ಮೊದಲಿಗೆ ಊಟದ ಮೆಸ್‌ಗೆ ಕಟ್ಟಲು ಹಣವಿಲ್ಲವೆಂದಾಗ, ಆರು ಸಾವಿರ ಹಣವನ್ನು ಯುವತಿಯ ಗೆಳೆತಿಯ ಅಕೌಂಟ್‌ಗೆ ವರ್ಗಾವಣೆ ಮಾಡಿದ್ದಾನೆ. ಅಲ್ಲಿಂದ ಆರಂಭವಾದ ಈ ಹಣದ ವ್ಯವಹಾರ ಹೆಚ್ಚು ಕಡಿಮೆ 8 ರಿಂದ 10 ಲಕ್ಷದವರೆಗೂ ಹೋಗಿದ್ದು, ಯುವತಿಗಾಗಿ ಕೇರಳಕ್ಕೆ ಹೋಗಿ ಶಿಕ್ಷಕ ಖಾಲಿ ಕೈಯಲ್ಲಿ ವಾಪಸ್ ಬಂದಿದ್ದಾರೆ.ಪರಿಚಯವಾದಾಗಿನಿಂದಲೂ ಭೇಟಿಯಾಗೋದಕ್ಕೆ ಹವಣಿಸೋ ಶಿಕ್ಷಕನನ್ನು ಒಮ್ಮೆ ಹೈದರಾಬಾದ್‌ಗೆ ಕರೆಸಿದ್ದ ಯುವತಿ, ಅಲ್ಲಿ ಮತ್ತೊಂದು ಯುವತಿಯ ಪರಿಚಯ ಮಾಡಿಸಿದ್ದಾರೆ. ಅದು ಕೂಡ ಪೋನಿನಲ್ಲೇ. ಅಲ್ಲಿಯೂ ಒಂದಷ್ಟು ಹಣ ಕಳೆದುಕೊಂಡು ಬಂದ ಶಿಕ್ಷಕ ಇದೀಗ ಯುವತಿಯ ಜೊತೆ ಮದುವೆಯಾಗಲು ಹಾತೊರೆಯುತ್ತಿದ್ದಾರೆ. ಯುವತಿ ಮಾತ್ರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದನ್ನೂ ಓದಿ: ಮೂಡಬಿದರೆಯಲ್ಲಿ ಸ್ಕೌಟ್ಸ್ & ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ – ಖಡಕ್ ರೊಟ್ಟಿ, ಚಟ್ನಿ ಗಿಫ್ಟ್
Sign in to your account
Username or Email Address


Password

 Remember Me


