ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಪ್ರೇಮ ಪಕ್ಷಿಗಳಾಗಿ ರೂಪೇಶ್ ಶೆಟ್ಟಿ (Roopesh Shetty) ಮತ್ತು ಸಾನ್ಯ ಅಯ್ಯರ್ (Sanya Iyer) ಹೈಲೈಟ್ ಆಗಿದ್ದರು. ಸಾನ್ಯ ಎಲಿಮಿನೇಷನ್‌ನಿಂದ ಕುಗ್ಗಿ ಹೋಗಿದ್ದ ರೂಪೇಶ್ ಇತ್ತೀಚೆಗೆ ಆಕ್ಟೀವ್ ಆಗಿದ್ದರು. ಆದರೆ ಇದೀಗ ಮತ್ತೆ ಸಾನ್ಯ ನೆನಪಿನಲ್ಲಿ ಬಿಟ್ಟು ಹೋಗಬೇಡ ಎಂದು ಕಣ್ಣೀರಿಟ್ಟಿದ್ದಾರೆ.ಒಟಿಟಿಯಿಂದ ಬಿಗ್ ಬಾಸ್ ಶೋವರೆಗೂ ಒಟ್ಟಾಗಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಬಂದಿರೋ ರೂಪೇಶ್ ಮತ್ತು ಸಾನ್ಯ ಜೋಡಿ ನೋಡುಗರಿಗೂ ಫೇವರೇಟ್ ಆಗಿದ್ದರು. ದಿಢೀರ್ ಎಂದು ಸಾನ್ಯ ಎಲಿಮಿನೇಟ್‌ನಿಂದ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇದರಿಂದ ಅವರಿಗೆ ಸುಧಾರಿಸಿಕೊಳ್ಳಲು ಕ್ರಮೇಣ ಒಂದು ವಾರ ತೆಗೆದುಕೊಂಡಿದ್ದರು. ಈಗ ಮತ್ತೆ ಈಗ ರಾಕ್‌ಸ್ಟಾರ್‌ನಂತೆ ಮನೆಯ ಕ್ಯಾಪ್ಟನ್ ಆಗಿ ಶೆಟ್ರು ಮಿಂಚ್ತಿದ್ದಾರೆ. ಹೀಗಿರುವಾಗ ಎಂದಿನಂತೆ ಬಿಗ್ ಬಾಸ್ ಟಾಸ್ಕ್‌ವೊಂದನ್ನ ಕೊಟ್ಟಿದ್ದರು. ಮ್ಯೂಸಿಕ್ ಅಷ್ಟೇ ಹಾಡನ್ನ ಸ್ಪರ್ಧಿಗಳು ಗುರುತಿಸಬೇಕು. ಈ ವೇಳೆ ರೂಪೇಶ್ ಕೊಂಚ ಭಾವುಕರಾಗಿದ್ದಾರೆ. ಇದನ್ನೂ ಓದಿ: ಆಲ್ವಿನ್ ಹೆನ್ರಿ ನಿರ್ದೇಶನದ ‘ಕ್ರಿಸ್ಟಿ’ ಚಿತ್ರದ ಫಸ್ಟ್ ಲುಕ್ ರಿಲೀಸ್ಟಾಸ್ಕ್‌ನಲ್ಲಿ ಬಿಟ್ಟೋಗ್ಬೇಡ ಹಾಡನ್ನ ಪ್ಲೇ ಮಾಡಿದ್ದಾರೆ. ಈ ವೇಳೆ ರೂಪೇಶ್ ಶೆಟ್ಟಿ ಭಾವುಕರಾಗಿದ್ದಾರೆ. ಮತ್ತೆ ಬಿಟ್ಟೋಗ್ಬೇಡ ಸಾಂಗನ್ನ ಪ್ಲೇ ಮಾಡಿ ಎಂದು ಬಿಗ್‌ ಬಾಸ್‌ಗೆ ಕೇಳಿದ್ದಾರೆ. ಕಡೆಗೆ ತಾವೇ ಲಿರಿಕ್ಸ್ ಹಾಡಿದ್ದಾರೆ. ಬಿಟ್ಟೋಗ್ಬೇಡ ಎಂದು ದಿಂಬಿಗೆ ಹೊಡೆದಿದ್ದಾರೆ. ಸಾನ್ಯ ನೆನಪಲ್ಲಿ ರೂಪೇಶ್‌ ಹಾಡಿದ್ದಾರೆ.ರೂಪೇಶ್ ವರ್ತನೆಯಲ್ಲಿ ಕೊಂಚ ಬದಲಾವಣೆ ನೋಡಿ ದೀಪಿಕಾ ದಾಸ್ ಕೂಡ ಕಿರುಚಬೇಡಿ ಎಂದಿದ್ದಾರೆ. ಯೆಸ್, ಇದು ಬಿಗ್ ಬಾಸ್ ಮನೆ ಅಲ್ವಾ ಅಂತಾ ಮತ್ತೆ ರೂಪೇಶ್ ನಾರ್ಮಲ್ ಆಗಿ ಬಿಹೇವ್ ಮಾಡಿದ್ದಾರೆ. ಒಟ್ನಲ್ಲಿ ರೂಪೇಶ್, ಸಾನ್ಯ ನೆನಪಲ್ಲಿ ಬಿಗ್ ಬಾಸ್ ಮನೆಯಲ್ಲಿರುವುದು ಮೆಲ್ನೋಟಕ್ಕೆ ಗೊತ್ತಾಗುತ್ತಿದೆ.
Sign in to your account
Username or Email Address


Password

 Remember Me


