ಬೆಳಗಾವಿ: ಮಾನಸಿಕ ಅಸ್ವಸ್ತ ರೋಗಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ರಾಮದುರ್ಗ ಪಟ್ಟಣದ ಖಾಸಗಿ ಲಾಡ್ಜ್‌ನಲ್ಲಿ (Lodge) ನಡದಿದೆ.ಮೃತನನ್ನು ಬಾಗಲಕೋಟೆ (Bagalakote) ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಯಲ್ಲಪ್ಪ ತಿರ್ಲಾಪುರ ಎಂದು ಗುರುತಿಸಲಾಗಿದೆ. ಯಲ್ಲಪ್ಪ ಕಳೆದ 15 ರಿಂದ 20 ದಿನಗಳ ಹಿಂದೆ ಚಿತ್ತರಗಿಯಿಂದ ಕಾಣೆಯಾಗಿದ್ದ ಎಂದು ಅವನ ಸಂಬಂಧಿಕರು ತಿಳಿಸಿದ್ದರು‌. ಈಗ 2-3 ದಿನದಿಂದ ಯಲ್ಲಪ್ಪ ರಾಮದುರ್ಗ ಪಟ್ಟಣದ ಹಳೆಯ ಬಸ್‌ಸ್ಟ್ಯಾಂಡ್ ಪಕ್ಕದಲ್ಲಿದ್ದ ನಾಯಕ ಲಾಡ್ಜನಲ್ಲಿದ್ದು, ಕಾಲ ಕಳೆಯುತ್ತಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಾಜ್ಯಮಟ್ಟದ ಹೋರಿ ಸ್ಪರ್ಧೆಯಲ್ಲಿ ಹೋರಿ ತಿವಿದು ಯುವಕ ಸಾವು – 10 ಕ್ಕೂ ಹೆಚ್ಚು ಜನರಿಗೆ ಗಾಯಲಾಡ್ಜ್‌ನ ಕೊಠಡಿ ಸ್ವಚ್ಛ ಮಾಡಲು ಹೋದ ಸಿಬ್ಬಂದಿಗೆ ಯಲ್ಲಪ್ಪ ಸಾವನ್ನಪ್ಪಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಭೇಟಿ ನೀಡಿದ ರಾಮದುರ್ಗ ಪಟ್ಟಣದ ಪೊಲೀಸ್ ಠಾಣೆಯ ಎಸ್ಐ ಯರಗಟ್ಟಿ ಸೇರಿದಂತೆ ಇತರ ಪೊಲೀಸ್‌ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷ – ಅರುಣಾಚಲ ಪ್ರದೇಶದ ಮೇಲೆ ಡ್ರ್ಯಾಗನ್‌ ಕಣ್ಣು ಹಾಕಿದ್ದು ಯಾಕೆ?
Sign in to your account
Username or Email Address


Password

 Remember Me


