ಹಾಸನ: ಜಿಲ್ಲೆಯ ಕಾಂಗ್ರೆಸ್ (Congress) ಅಭ್ಯರ್ಥಿಗಳ ಪ್ರಪೋಸಡ್ ಪಟ್ಟಿ ವೈರಲ್ ಆಗಿದೆ. ಕೆಪಿಸಿಸಿಯಿಂದ (KPCC) ತಾತ್ಕಾಲಿಕವಾಗಿ ಫೈನಲ್ ಮಾಡಿ ಮುಂದಿನ ಕಮಿಟಿಗೆ ಕಳುಹಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಜೆಡಿಎಸ್‍ನ (JDS) ಹಾಲಿ ಶಾಸಕರ ಹೆಸರು ಇದ್ದು ಭಾರಿ ಕುತೂಹಲ ಮೂಡಿಸಿದೆ. ಹಾಲಿ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalinge Gowda) ಪಕ್ಷ ತೊರೆದು ಕಾಂಗ್ರೆಸ್‍ನಿಂದ ಸ್ಪರ್ಧಿಸುತ್ತಾರಾ ಎಂಬ ಚರ್ಚೆಗೆ ಈ ಪಟ್ಟಿ ಇಂಬು ನೀಡಿದೆ. ಕಾಂಗ್ರೆಸ್‍ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಅರಸೀಕೆರೆಯಿಂದ ಟಿಕೆಟ್ ಎಂಬ ಚರ್ಚೆಗಳಿಗೆ ಈ ಪಟ್ಟಿ ಇನ್ನಷ್ಟು ಪುಷ್ಠಿ ನೀಡಿದೆ. ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಒಕ್ಕಲಿಗ ಪ್ಲೇ ಕಾರ್ಡ್ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಕೆ.ಎಂ.ಶಿವಲಿಂಗೇಗೌಡ, ಅರಕಲಗೂಡು ಕ್ಷೇತ್ರದಿಂದ ಹಾಲಿ ಬಿಜೆಪಿಯಲ್ಲಿರುವ ಹಾಗೂ ಮಾಜಿ ಸಚಿವ ಎ.ಮಂಜು, ಬೇಲೂರು ಕ್ಷೇತ್ರದಿಂದ ಮಾಜಿ ಸಚಿವ ಬಿ.ಶಿವರಾಂ, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ದಿವಂಗತ ಹೆಚ್.ಸಿ.ಶ್ರೀಕಂಠಯ್ಯ ಹಿರಿಯ ಪುತ್ರ ಲಲಿತ್ ರಾಘವ್, ಹಾಸನ ವಿಧಾನಸಭಾ ಕ್ಷೇತ್ರದಿಂದ ಬಿ.ಕೆ.ರಂಗಸ್ವಾಮಿ ಅಲಿಯಾಸ್ ಬನವಾಸೆ ರಂಗಸ್ವಾಮಿ, ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರದಿಂದ ಶ್ರೇಯಸ್ ಪಟೇಲ್, ಆಲೂರು-ಸಕಲೇಶಪುರ ಕ್ಷೇತ್ರದಿಂದ ಮುರುಳಿ ಮೋಹನ್‍ಗೆ ಟಿಕೆಟ್ ಶಿಫಾರಸ್ಸು ಮಾಡಿ ಕಳುಹಿಸಿರುವ ಪಟ್ಟಿ ವೈರಲ್ ಆಗಿದ್ದು ಆಕಾಂಕ್ಷಿಗಳಲ್ಲಿ ಕೊಂಚ ನಿರಾಸೆ ಮೂಡಿದೆ. ಇದನ್ನೂ ಓದಿ: ಪಕ್ಷಕ್ಕೆ ತೊಂದರೆಯಾದ್ರೆ ನೀವಿಬ್ಬರೇ ಕಾರಣ – ಸಿದ್ದು, ಡಿಕೆಶಿಗೆ ಕೆ.ಸಿ ವೇಣುಗೋಪಾಲ್ ಖಡಕ್ ವಾರ್ನಿಂಗ್
Sign in to your account
Username or Email Address


Password

 Remember Me


