ಚಾಮರಾಜನಗರ: ನಿಮ್ಮನ್ನೆಲ್ಲ ನೋಡಿ ಹೃದಯ ತುಂಬಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿ ಅಭಿವೃದ್ಧಿಗೆ ಆಶೀರ್ವದಿಸಲು ಬಂದಿದ್ದೀರಿ. ನಿಮ್ಮ ಒಳ್ಳೆಯತನ, ಕಣ್ಣಲ್ಲಿರುವ ಭಾವನೆ ನನ್ನ ಮನ ಮುಟ್ಟಿದೆ. ಚಾಮರಾಜನಗರಕ್ಕೆ(Chamarajanagar) ಹೋಗಬಾರದು ಅಂತ ಬಹಳ ಜನ ಹೇಳುತ್ತಾರೆ. ಇಲ್ಲಿಗೆ ಬಾರದವರು ಜೀವನದಲ್ಲಿ ದೊಡ್ಡ ಕೊರತೆ ಅನುಭವಿಸುತ್ತಾರೆ. ಇಲ್ಲಿಗೆ ಬಂದಿರುವುದಕ್ಕೆ ನಾನೇ ಪುಣ್ಯವಂತ ಎಂದು ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಹೇಳಿದ್ದಾರೆ.ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆಸಿದ ಮಾತನಾಡಿದ ಅವರು, ಗಡಿ ಜಿಲ್ಲೆಗಳ ಅಭಿವೃದ್ಧಿಗೆ ಪ್ರಾಶಸ್ತ್ಯವನ್ನು ನಮ್ಮ ಸರ್ಕಾರ ಕೊಟ್ಟಿದೆ.1500 ಗಡಿ ಗ್ರಾಮಗಳ ಅಭಿವೃದ್ಧಿಗೆ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. 100 ಕೋಟಿ ರೂ.ಗಳನ್ನು ಗಡಿ ಗ್ರಾಮಗಳ ಅಭಿವೃದ್ಧಿಗೆ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.ಪ್ರತಿ ಗ್ರಾಮದ ಅಭಿವೃದ್ಧಿಯೇ ನಮ್ಮ ಸಂಕಲ್ಪ. ರಾಜ್ಯದಲ್ಲಿರುವ ಗಡಿ ಭಾಗದ ಜನರ ಭಾವನೆಗಳ ಅರಿತು ಕೆಲಸ ಮಾಡುತ್ತಿರುವುದರಿಂದ ಗಡಿ ಆಚೆಗಿನ ಜನರು ನಮ್ಮ ಕಡೆ ನೋಡುತ್ತಿದ್ದಾರೆ. ಮಲೆ ಮಹದೇಶ್ವರ ಪ್ರದೇಶ, ಮಾದೇಶ್ವರನ ಆಶೀರ್ವಾದಿಂದ ನೀವು ಬದುಕುತ್ತಿರುವ ಭೂಮಿ ಪುಣ್ಯ ಭೂಮಿ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪ್ರದೇಶವಾಗಿಸಲು ನಾವು ಸಿದ್ಧರಿದ್ದೇವೆ. ಇಲ್ಲಿನ ಭೂಮಿಗೆ ನೀರಿನ ವ್ಯವಸ್ಥೆ ಮಾಡಿದರೆ ರೈತರ ಬೆವರಿನ ಹನಿ ಅದಕ್ಕೆ ಸೇರಿದರೆ ಬಂಗಾರದ ಬೆಳೆಯನ್ನು ಭೂಮಿ ತಾಯಿ ಕೊಡುತ್ತಾಳೆ ಎಂದು ಹೇಳಿದರು. ಇದನ್ನೂ ಓದಿ: ನಾನು ಈಗ ಬೆಳೆಯುತ್ತಿದ್ದರೆ ಊರು ಬಿಟ್ಟು ಅಮೆರಿಕಕ್ಕೆ ಎಂದೂ ಹೋಗುತ್ತಿರಲಿಲ್ಲ: ಅಡೋಬ್ ಸಿಇಒನಾನು ಸಿಎಂ ಆದ ನಾಲ್ಕು ಗಂಟೆಯಲ್ಲಿ ವಿದ್ಯಾನಿಧಿ ಘೋಷಣೆ ಮಾಡಿದೆ. ಎಲ್ಲಾ ಮಕ್ಕಳು ವಿದ್ಯಾವಂತರಾಗಬೇಕು. ರೈತ, ಕೂಲಿ, ನೇಕಾರ, ಟ್ಯಾಕ್ಸಿ ಡ್ರೈವರ್ ಮಕ್ಕಳಿಗೆ ಯೋಜನೆ ಮಾಡಿದ್ದೇವೆ. ಕಾಯಕ ಯೋಜನೆಯಡಿ 50 ಸಾವಿರ ರೂ. ಪ್ರೋತ್ಸಹ ಧನ ನೀಡುತ್ತಿದ್ದೇವೆ. 5 ಲಕ್ಷ ಮಹಿಳೆಯರಿಗೆ ಹಾಗೂ ಯುವಕರಿಗೆ ಉದ್ಯೋಗ ಕೊಟ್ಟಿದ್ದೇವೆ ಎಂದು ತಿಳಿಸಿದರು.ಕೇವಲ ಭಾಷಣದಿಂದ ಸಾಮಾಜಿಕ ನ್ಯಾಯ ಅಂದರೆ ಆಗುವುದಿಲ್ಲ. ಕೆಲಸ ಮಾಡಿ ತೋರಿಸಬೇಕು. ಎಸ್ಸಿ, ಎಸ್ಟಿ ಮೀಸಲಾತಿ ಬಹಳ ವರ್ಷಗಳ ಬೇಡಿಕೆಯಿತ್ತು. ಕೆಲವರಿಗೆ ಕೆಲವು ಸಂದರ್ಭದಲ್ಲಿ ಅದರ ಬಗ್ಗೆ ಚಿಂತನೆಯಲ್ಲಿ ಗೋಡೆಗಳಿರುತ್ತವೆ. ಅದನ್ನು ಒಡೆದು ವಾಸ್ತವ ಅರಿತು ಸ್ಪಂದಿಸಿದರೆ ದೊಡ್ಡ ಕ್ರಾಂತಿ ಆಗುತ್ತದೆ. ಅದಕ್ಕೆ ಯಾರೂ ಧೈರ್ಯ ಮಾಡಲಿಲ್ಲ. ಆ ಜನ ಇನ್ನು ತಳಮಟ್ಟದಲ್ಲಿದ್ದಾರೆ. ಅವರು ಬದುಕಿನಲ್ಲಿ ಮುಂದೆ ಬರಬೇಕು. ಕೊನೆಯವರೆಗೂ ಅದಕ್ಕಾಗಿ ಹೋರಾಟ ಮಾಡಿದ್ದೇನೆ. ಭಾಷಣದಿಂದ ಹೊಟ್ಟೆ ತುಂಬುವುದಿಲ್ಲ. ಎಷ್ಟು ವರ್ಷ ಅಧಿಕಾರದಲ್ಲಿ ಇರುತ್ತೇವೆ ಮುಖ್ಯವಲ್ಲ. ಸಿಎಂ ಆಗಲು ಅಂತ ಹುಟ್ಟಿದವರು ಬಹಳ ಜನ ಇದ್ದಾರೆ. ಆದರೆ ನಾನೇನು ಸಿಎಂ ಆಗ್ಬೇಕು ಅಂತ ಕನಸು ಕಂಡಿರಲಿಲ್ಲ. ದೇವರು ಕೊಟ್ಟಿರುವ ಅವಕಾಶ ಬಳಸಿಕೊಳ್ಳಬೇಕು. ಎಲ್ಲ ಟೀಕೆ ಟಿಪ್ಪಣಿಗಳನ್ನು ಯಶಸ್ಸಿನ ಮೆಟ್ಟಿಲಾಗಿ ಪರಿವರ್ತನೆ ಮಾಡಿಕೊಳ್ಳುತ್ತೇನೆ. 60 ತಿಂಗಳಲ್ಲಿ ಒಂದು ತಿಂಗಳು ರಾಜಕೀಯ ಮಾಡೋಣ. ಉಳಿದ ಅವಧಿಯಲ್ಲಿ ಅಭಿವೃದ್ದಿ ಕೆಲಸ ಮಾಡೋಣ. ಗೋಡಾ ಹೈ ಮೈದಾನ್ ಹೈ ಅಲ್ಲಿ ಹೋರಾಟ ಮಾಡೋಣವೆಂದರು.
Sign in to your account
Username or Email Address


Password

 Remember Me


