ಬೆಂಗಳೂರು: ಕಳ್ಳತನಕ್ಕೆಂದು ಬಂದಿದ್ದ ಕಳ್ಳನ (Thief) ಮೇಲೆ ಮನೆ ಮಾಲೀಕ (Owner) ಗುಂಡು ಹಾರಿಸಿದ ಘಟನೆ ಬೆಂಗಳೂರಿನ (Bengaluru) ಸಂಪಿಗೇಹಳ್ಳಿಯ ರಾಚೇನಹಳ್ಳಿಯಲ್ಲಿ ನಡೆದಿದೆ.ಕಳ್ಳ ಲಕ್ಷ್ಮಣ್ ಎಂಬಾತನ ಕಾಲಿಗೆ ಮಾಲೀಕ ವೆಂಕಟೇಶ್ ಎಂಬಾತ ಗುಂಡು ಹಾರಿಸಿದ್ದಾನೆ. ಬೆಳಗಿನ ಜಾವ ಎರಡೂವರೆ ಸುಮಾರಿಗೆ ಮನೆಗೆ ಕಳ್ಳ ಲಕ್ಷ್ಮಣ್ ಎಂಟ್ರಿಯಾಗಿದ್ದ. ಲಕ್ಷ್ಮಣ್ ಕಾಂಪೌಂಡ್ ಹಾರುತ್ತಿದ್ದಂತೆ ನಾಯಿಗಳು ಜೋರಾಗಿ ಬೊಗಳೋಕೆ ಶುರು ಮಾಡಿದ್ದವು. ಈ ವೇಳೆ ನಾಯಿ (Dog) ಬೊಗಳುವ ಸದ್ದು ಕೇಳಿ ಎಚ್ಚೆತ್ತ ವೆಂಕಟೇಶ್ ತನ್ನ ಬಳಿಯಿದ್ದ ಲೈಸೆನ್ಸ್ ಡಬಲ್ ಬ್ಯಾರಲ್ ಗನ್ ತೆಗೆದುಕೊಂಡು ಹೊರಬಂದಿದ್ದಾನೆ.ಇದನ್ನು ನೋಡಿದ ಲಕ್ಷ್ಮಣ್ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆದರೆ ಆ ವೇಳೆಗೆ ಲಕ್ಷ್ಮಣ್‍ನ ಬಲಗಾಲಿಗೆ ಮಾಲೀಕ ವೆಂಕಟೇಶ್ ಗುಂಡು ಹಾರಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕಳ್ಳ ಲಕ್ಷ್ಮಣ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಸಂಪಿಗೇಹಳ್ಳಿ ಪೊಲೀಸರು (Police) ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಜೆಡಿಎಸ್‍ನ ಹಾಲಿ ಶಾಸಕರ ಹೆಸರು!ಈ ಬಗ್ಗೆ ಮನೆ ಮಾಲೀಕ ವೆಂಕಟೇಶ್ ಮಾತನಾಡಿ, ರಾತ್ರಿ ಎರಡೂವರೆ ಸುಮಾರಿಗೆ ಮನೆಯಲ್ಲಿ ನಾಯಿಗಳು ಜೋರಾಗಿ ಬೊಗಳಲು ಶುರುಮಾಡಿದ್ದವು. ಈ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಸಿಸಿಟಿವಿ ಮಾನಿಟರ್ ನೋಡಿದ ವೇಳೆ ಕಳ್ಳನೊಬ್ಬ ಒಳಗೆ ಬರುತ್ತಿರುವುದು ಗೊತ್ತಾಗಿತ್ತು. ತಕ್ಷಣ ಮನೆಯಲ್ಲಿದ್ದ ಡಬಲ್ ಬ್ಯಾರಲ್ ಗನ್ ಹಿಡಿದು ಹೊರ ಬಂದಿದ್ದೆ ಎಂದರು.ಈ ವೇಳೆ ಆತ ಗ್ಯಾಸ್ ಕಟರ್ ಹಿಡಿದು ಮನೆಯ ಗೇಟ್ ಒಳಗೆ ಬಂದಿದ್ದ. ಆಗ ನಾನು ಫಸ್ಟ್ ಫ್ಲೋರ್‌ನಿಂದಲೇ ಆತನ ಮೇಲೆ ಫೈರ್ ಮಾಡಿದೆ. ಇನ್ನೂ ತುಂಬಾ ಜನ ಕಳ್ಳರು ಒಟ್ಟಿಗೆ ಬಂದಿದ್ದಾರೆ ಅಂತಾ ಭಯವಾಗಿ ಫೈರ್ ಮಾಡಿದೆ ಎಂದ ಅವರು, ಐವತ್ತು ವರ್ಷದಿಂದ ಇದೇ ಜಾಗದಲ್ಲಿ ವಾಸವಾಗಿದ್ದಾನೆ, ಇದೇ ಮೊದಲ ಬಾರಿಗೆ ಈ ರೀತಿ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಮಗಳ ಮದುವೆಯೆಂದು ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದ ತಂದೆ ಕುಸಿದುಬಿದ್ದು ಸಾವು
Sign in to your account
Username or Email Address


Password

 Remember Me


