ಬೆಂಗಳೂರು: ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ (Bike) ಚಾಲಕ ಬಿಎಂಟಿಸಿ (BMTC) ಬಸ್ (Bus) ಟಯರ್‌ಗೆ ಸಿಲುಕಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ದೀಪಕ್ (30) ಮೃತ ದುರ್ದೈವಿ. ನಿನ್ನೆ ರಾತ್ರಿ 7:45ರ ಸುಮಾರಿಗೆ ಪೀಣ್ಯದ 14ನೇ ಕ್ರಾಸ್‍ನಲ್ಲಿ ಘಟನೆ ನಡೆದಿದೆ. ಪೀಣ್ಯ ಪೊಲೀಸ್ ಠಾಣೆ ಮಾರ್ಗವಾಗಿ ಕಾಮಾಕ್ಷಿಪಾಳ್ಯದ ಕಡೆ ತೆರಳುತಿದ್ದ ದೀಪಕ್, ಬೈಕ್‍ನಲ್ಲಿ ಬಸ್‍ನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದಾನೆ. ಮಾರ್ಗದ ಎಡಭಾಗದಲ್ಲಿ ಮುಂದೆ ಬರಲು ಯತ್ನಿಸಿದ ಆತ ಬಸ್‍ನ ಹಿಂಬದಿ ಟಯರ್‌ಗೆ ಸಿಲುಕಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ರಸ್ತೆಗಿಳಿಯಲಿದೆ ಟೋಯಿಂಗ್ ವಾಹನಗಳು – BBMP ನಿರ್ಧಾರಕ್ಕೆ ವಾಹನ ಸವಾರರು ಗರಂದೀಪಕ್ ಹೆಲ್ಮೆಟ್‌ ಧರಿಸದೇ ಬೈಕ್ ಚಲಾಯಿಸಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದೀಪಕ್ ಮೂಲತಃ ವಾರಣಾಸಿಯವಾನಾಗಿದ್ದು, ಕಳೆದ ಮೂರು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ. ಎಸ್‍ಎಸ್ ಫ್ಯಾಬ್ ಕಂಪನಿಯಲ್ಲಿ ಆಪರೇಟರ್ ಆಗಿ ಕೆಲಸ ಮಾಡುತಿದ್ದ. ಕೆಲಸ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೀಣ್ಯ ಸಂಚಾರಿ ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದ ಕೂಲಿ ಕಾರ್ಮಿಕರಿಗೆ ವಾಹನ ಡಿಕ್ಕಿ – ಮೂವರು ಸ್ಥಳದಲ್ಲೇ ಸಾವುLive Tv
[brid partner=56869869 player=32851 video=960834 autoplay=true]
Sign in to your account
Username or Email Address


Password

 Remember Me


