ಬೆಂಗಳೂರು: ನನ್ನ ಹಾಗೂ ಸಿಎಂ ಸಿದ್ದರಾಮಯ್ಯ (Siddaramaiah) ನಡುವೆ ಮತಭೇದ ಇರಬಹುದು, ಆದರೆ ಮನಭೇದ ಇಲ್ಲ ಎಂದು ಪರಿಷತ್ ಸದಸ್ಯ, ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ (B.K.Hariprasad) ಹೇಳಿದ್ದಾರೆ.ನಿನ್ನೆ ರಾತ್ರಿ ಸಿಎಂ ಭೇಟಿ ಬಗ್ಗೆ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ವತಿಯಿಂದ ಮುಖ್ಯಮಂತ್ರಿ ಅವರು ಮೈಸೂರು ಸಾರ್ವಜನಿಕ ಸಭೆಗೆ ಆಹ್ವಾನಿಸಿದ್ದರು. ಹೋಗಿ ಮಾತನಾಡಿ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: MUDA Scam | ಸಿದ್ದರಾಮಯ್ಯ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲುನಮ್ಮಲ್ಲಿ ಮತಬೇಧ ಇರಬಹುದು, ಆದರೆ ಮನ ಬೇಧ ಇರುವುದಿಲ್ಲ. ಮೈಸೂರಿಗೆ ಹೋಗಿ ಸಮಾವೇಶದಲ್ಲಿ ಭಾಗವಹಿಸುತ್ತೇನೆ. ಬಿಜೆಪಿ ಜೆಡಿಎಸ್ ಏನೇನು ಹೇಳಬೇಕೋ ಹೇಳುತ್ತಿದ್ದಾರೆ. ಅದಕ್ಕೆಲ್ಲ ಮೈಸೂರಲ್ಲೇ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.ರಾಜಕೀಯ ಬೆಳವಣಿಗೆ ಆದಾಗ ಹೈಕಮಾಂಡ್ ನಾಯಕರು ಬರುವುದು ಸಹಜ. ಕೆಲವೊಂದು ನಿರ್ದೇಶನ ಅವರೂ ಕೂಡ ಕೊಟ್ಟಿರ್ತಾರೆ ಅಂತಾ ಭಾವಿಸುತ್ತೇನೆ. ವಿರೋಧ ಪಕ್ಷ ಯಾವುದೇ ಇರಲಿ. ಸರ್ಕಾರವನ್ನು ಕೆಡವುದು ಬಿಡುವುದು ಅಷ್ಟು ಸುಲಭವಲ್ಲ ಎಂದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಪವನ್ ಕಲ್ಯಾಣ್ದೇವೇಗೌಡರಾಗಲಿ ಅಥವಾ ವಿಪಕ್ಷ ನಾಯಕರಾಗಲಿ ಯಾರೂ ಸನ್ಯಾಸಿಗಳಲ್ಲ. ಅವರ ರಾಜಕಾರಣ ಅವರು ಮಾಡಲಿ, ನಮ್ಮ ರಾಜಕಾರಣ ನಾವು ಮಾಡ್ತೇವೆ. ರಾಜಭವನವನ್ನು ಬಳಸಿಕೊಳ್ಳುವುದು ಹೊಸದೇನಲ್ಲ. ದೇಶದ ಎಲ್ಲ ರಾಜಭವನಗಳೂ ಕೂಡ ಬಿಜೆಪಿ ಕಚೇರಿಗಳಾಗಿವೆ ಎಂದು ಹೇಳಿದರು.Sign in to your account
Username or Email Address


Password

 Remember Me


