ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬರ್ಬರ ಕೊಲೆ ಮಾಡಿದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಹೆಣ್ಣೂರಿನಲ್ಲಿ ನಡೆದಿದೆ.ಕುಪ್ಪಣ್ಣ(72) ಎಂಬಾತನನ್ನು ಮಧು ಎನ್, ಸಹಬಾಸ್ ಎಂಬವರು ಕೊಲೆ ಮಾಡಿದ್ದಾರೆ. ಕುಪ್ಪಣ್ಣ ಹಾಗೂ ಅಪ್ರಾಪ್ತೆ ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಬಾಲಕಿಯು (Girl) ಒಣ ಹಾಕಿದ್ದ ಬಟ್ಟೆ ತೆಗೆದುಕೊಂಡು ಬರಲು ಹೋಗಿದ್ದ ಸಂದರ್ಭದಲ್ಲಿ ಆಕೆಯನ್ನು ಕರೆಸಿ ಕುಪ್ಪಣ್ಣ ಜ್ಯೂಸ್ ನೀಡಿದ್ದ. ಈ ಜ್ಯೂಸ್‍ನಲ್ಲಿ ನಶೆ ಪದಾರ್ಥ ಬೆರಸಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ವೇಳೆಗೆ ಬಾಲಕಿಯನ್ನು ಹುಡುಕಿಕೊಂಡು ಬಂದ ಪೋಷಕರಿಗೆ ಕೃತ್ಯ ಬೆಳಕಿಗೆ ಬಂದಿದೆ.ವಿಚಾರ ತಿಳಿದ ಬಾಲಕಿಯ ಮನೆಯವರು ಕುಪ್ಪಣ್ಣನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಕುಪ್ಪಣ್ಣನಿಗೆ ತೀವ್ರ ರಕ್ತಸ್ರಾವ ಉಂಟಾಗಿತ್ತು. ನಂತರ ಪೊಲೀಸ್ ಠಾಣೆಗೆ (Police Station) ವಿಚಾರ ತಿಳಿದು ಸ್ಥಳಕ್ಕೆ ಹೋಗುವಷ್ಟರಲ್ಲಿ ಕುಪ್ಪಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದ. ಘಟನೆಗೆ ಸಂಬಂಧಿಸಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Sign in to your account
Username or Email Address


Password

 Remember Me


