ಬೆಳಗಾವಿ: ಗುಜರಾತ್ ಮಾದರಿಯಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆಗೆ ಹೊಸ ಜನರಿಗೆ ಅವಕಾಶ ನೀಡಬೇಕು‌ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಆಗ್ರಹಿಸಿದರು.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಜರಾತ್ ಮಾದರಿಯಲ್ಲೇ ಮಾಡಬೇಕು ಹೊಸ ಹೊಸ ಜನರಿಗೆ ಅವಕಾಶ ನೀಡಬೇಕು. ಈ ಸಾರಿ ಗುಜರಾತ್ (Gujarat) ಮಾದರಿಯಲ್ಲೇ ಮಾಡ್ತಾರೆ. ಬಹಳಷ್ಟು ಬದಲಾವಣೆ ಮಾಡುತ್ತಾರೆ. ಯಾರ ಮೇಲೆ ಆರೋಪ ಇದೆ ಅಂತವರನ್ನು ತೆಗೆಯುತ್ತಾರೆ. ಒಂದೇ ಕುಟುಂಬದಲ್ಲಿ ಎರಡು ಮೂರು ಟಿಕೆಟ್ ಸಿಗುವುದಿಲ್ಲ. ಒಂದೇ ಕುಟುಂಬದಲ್ಲಿ ಬಹಳ ಜನ ಜಾಕೆಟ್ ಹೊಲಿಸಿಕೊಂಡು ಕುಳಿತಿದ್ದಾರೆ. ಅಪ್ಪ, ‌ಮಕ್ಕಳು, ಅಣ್ಣ ತಮ್ಮ ಅವರಿಗೆ ಟಿಕೆಟ್ ಸಿಗುವುದಿಲ್ಲ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಸಿಗುತ್ತದೆ. ಕರ್ನಾಟಕದ (Karnataka) ಬಿಜೆಪಿಯಲ್ಲಿ (BJP) ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳುತ್ತದ ಎಂದರು.ಸಂಪುಟ ವಿಸ್ತರಣೆ ಯಾರಿಗೆ ಬೇಕು ಎಲ್ಲವನ್ನೂ ಬೊಮ್ಮಾಯಿ ಅವರೇ ಇಟ್ಟುಕೊಂಡು ಕೂಡಲಿ. ಹತ್ತು ಬೇಡ ಎಲ್ಲ ಅವರು ಇಟ್ಟುಕೊಂಡಿರಲಿ. ಮೂರ್ನಾಲ್ಕು ತಿಂಗಳು ಉಳಿದಿದೆ. ಅಷ್ಟರಲ್ಲಿ ಏನೂ ಅಭಿವೃದ್ಧಿ ಮಾಡಲು ಆಗುತ್ತದೆ. ಮುಂದಿನ‌ ಚುನಾವಣೆಯಲ್ಲಿ ಎಲ್ಲರೂ ಮಂತ್ರಿ ಆಗಬೇಕು ಅಂತಾ ಸುಮ್ಮನಿದ್ದಾರೆ ಎಂದು ತಿಳಿಸಿದರು.ಸಮೀಕ್ಷೆಯಲ್ಲಿ ಬಿಜೆಪಿ ಹಿನ್ನಡೆ ಆಗ್ತಿದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ನರೇಂದ್ರ ಮೋದಿ ಪ್ರವಾಸ ಮಾಡುತ್ತಾರೆ. ಯಡಿಯೂರಪ್ಪ (BS Yediyurappa) ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರನ್ನಾಗಿ ಮಾಡಿದ್ದಾರೆ ಎಂದು ಯಡಿಯೂರಪ್ಪ ವಿಚಾರದಲ್ಲಿ ಯತ್ನಾಳ್ ಸಾಫ್ಟ್‌ ಕಾರ್ನರ್ ತೋರಿಸಿದ್ದಾರೆ. ಇದನ್ನೂ ಓದಿ: ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ- ಸರ್ಕಾರ ಯಾವುದೇ ಕ್ರಮ ಕೈಗೊಳ್ತಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಕ್ಷೇತ್ರ ಸಂಚಾರ ಮಾಡಬೇಕು. ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಂಚಾರ ಮಾಡ್ತಾರೆ. ನಾನು ಕ್ಷೇತ್ರದಲ್ಲಿ ಸಂಚಾರ ಮಾಡುವ ಅಗತ್ಯವಿಲ್ಲ ರಾಜ್ಯಾದ್ಯಂತ ಸಂಚಾರ ಮಾಡುತ್ತೇನೆ ಎಂದರು. ಇದನ್ನೂ ಓದಿ: ನರ್ಸಿಂಗ್ ಕಾಲೇಜಿನಲ್ಲಿ ಮಾಸ್ ಕಾಪಿ – 10 ಸಾವಿರ ವಸೂಲಿ ಮಾಡಿ ಪರೀಕ್ಷೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ
Sign in to your account
Username or Email Address


Password

 Remember Me


