ತಮ್ಮ ನಟನೆಯ ಪಠಾಣ್ ಸಿನಿಮಾದ ಚೊಚ್ಚಲು ಹಾಡು ರಿಲೀಸ್ ಆದ ಬೆನ್ನಲ್ಲೇ ಬಾಲಿವುಡ್ ನಟ ಶಾರುಖ್ ಖಾನ್ ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬೆಳಗ್ಗೆಯೇ ದೇವಸ್ಥಾನಕ್ಕೆ ಆಗಮಿಸಿದ್ದ ಶಾರುಖ್, ಮುಖ ಮುಚ್ಚಿಕೊಂಡು ದೇವರ ದರ್ಶನ ಪಡೆದಿದ್ದಾರೆ. ಅವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.ಬಾಡಿಗಾಡ್ ಜೊತೆ ಕಾರಿನಲ್ಲಿ ಬಂದಿಳಿದ ಶಾರುಖ್, ಕಾರಿನಿಂದ ಇಳಿದು ನೇರವಾಗಿ ವೈಷ್ಣೋದೇವಿ ದೇವಸ್ಥಾನದ ಒಳಗೆ ಹೋಗಿದ್ದಾರೆ. ದೇವಸ್ಥಾನದ ಒಳಗೆ ಬಾಡಿಗಾಡ್ ಜೊತೆ ಹೋಗುತ್ತಿರುವ ಶಾರುಖ್ ವಿಡಿಯೋ ಕೂಡ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ಶಾರುಖ್ ಮುಖಕ್ಕೆ ಬಟ್ಟೆಯಿಂದ ಮುಚ್ಚಿದ್ದಾರೆ. ಶಾರುಖ್ ಬಂದಿರುವ ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿದ್ದವರು ಅವರನ್ನು ಸುತ್ತುವರೆದಿದ್ದಾರೆ. ಬಾಡಿಗಾಡ್ ಅಲ್ಲಿ ನೆರದಿದ್ದ ಜನರನ್ನು ಸರಿಸುತ್ತಾ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.Shah Rukh Khan reached Maa Vaishno Devi Temple to seek blessings ????#ShahRukhKhan???? pic.twitter.com/M8OZpmlvz0— Troll SRK Haters (@trollsrkhaters5) December 12, 2022ಪಠಾನ್ ಸಿನಿಮಾ ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಮೂಲಕ ಸಾಕಷ್ಟು ಭರವಸೆ ಮೂಡಿಸಿರುವ ಈ ಸಿನಿಮಾ, ಮೊದಲ ಹಾಡಿನ ಮೂಲಕ ಪ್ರಚಾರ ಆರಂಭಿಸಲಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಕಾಂಬಿಷೇನ್ ನ ಸಿನಿಮಾ ಇದಾಗಿದ್ದು, ಶುರುವಿನಿಂದ ಈವರೆಗೂ ಕುತೂಹಲವನ್ನು ಕಾಪಾಡಿಕೊಂಡೇ ಬರುತ್ತಿದೆ.ನಿನ್ನೆ ಹಾಡು ರಿಲೀಸ್ ಆಗುತ್ತಿರುವ ವಿಷಯವನ್ನು ಸ್ವತಃ ಶಾರುಖ್ ಖಾನ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಈ ಹಾಡನ್ನು ನೋಡಲು ತಾವೂ ಕೂಡ ಕಾತರದಿಂದ ಕಾಯುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದರು. ಅಲ್ಲದೇ ಅಭಿಮಾನಿಗಳು ಕೂಡ  ಅಷ್ಟೇ ಕುತೂಹಲದಿಂದಲೇ ಹಾಡಿಗಾಗಿ ಕಾದಿದ್ದರು. ಬಿಡುಗಡೆಯಾದ ಹಾಡಿಗೆ ಅಭಿಮಾನಿಗಳು ಕೂಡ ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್ಇದು ಶಾರುಖ್ ಖಾನ್ ವೃತ್ತಿ ಜೀವನದ ಮಹತ್ವದ ಸಿನಿಮಾ ಎನ್ನಲಾಗುತ್ತಿದ್ದು, ಸತತ ಸೋಲಿನ ಬಳಿಕೆ ಬಾಲಿವುಡ್ ಗೆ ಈ ಸಿನಿಮಾ ಶಕ್ತಿ ತುಂಬಲಿದೆ ಎಂದು ಹೇಳಲಾಗುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಕಾಂಬಿನೇಷನ್ ಇರುವುದರಿಂದ ಬಾಕ್ಸ್ ಆಫೀಸಿನಲ್ಲೂ ಈ ಸಿನಿಮಾ ಹಿಟ್ ಆಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಇಂದು ಬಿಡುಗಡೆ ಆಗಿರುವ ಹಾಡು ಅಂಥದ್ದೊಂದು ಭರವಸೆಯನ್ನೂ ಮೂಡಿಸಿದೆ.
Sign in to your account
Username or Email Address


Password

 Remember Me


