ಬೆಂಗಳೂರು: ಮೂರು ದಿನಗಳ ಹಿಂದೆ ಕಲಬುರಗಿಯಲ್ಲಿ ಕಾಂಗ್ರೆಸ್(Congress) ಆಯೋಜಿಸಿದ್ದ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರ ಅಭಿನಂದನಾ ಸಮಾರಂಭದಲ್ಲಿ ಸಿದ್ದರಾಮಯ್ಯ(Siddaramaiah) ತೋರಿದ್ದ ವರ್ತನೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.ವೇದಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಿದಾಗ ವೇದಿಕೆ ಮೇಲಿದ್ದ ಕಾಂಗ್ರೆಸ್‌ ನಾಯಕರೆಲ್ಲಾ ಎದ್ದು ನಿಂತು ಗೌರವ ನೀಡಿದ್ದರು. ಆದರೆ ವಿಪಕ್ಷ ನಾಯಕ ಮಾತ್ರ ಎದ್ದು ನಿಂತು ಗೌರವ ನೀಡುವುದು ಇರಲಿ. ಖರ್ಗೆ ಅವರತ್ತ ತಲೆಯನ್ನೂ ತಿರುಗಿಸಿರಲಿಲ್ಲ. ಇದನ್ನೂ ಓದಿ: ಜೋಡೋ ಯಾತ್ರೆಗೆ ಹೋಗೋವಾಗ ಎಚ್ಚರದಲ್ಲಿರಿ – ಜೇಬುಗಳ್ಳರಿದ್ದಾರೆ ಎಂದ ಪೊಲೀಸರುಖರ್ಗೆ ವೇದಿಕೆಗೆ ಬರುತ್ತಿರುವಾಗ ಸಿದ್ದರಾಮಯ್ಯ ಕುರ್ಚಿಯ ಹಿಂದುಗಡೆ ಇದ್ದ ವ್ಯಕ್ತಿಯ ಜೊತೆ ಮಾತನಾಡುತ್ತಿದ್ದರು. ಸಿದ್ದರಾಮಯ್ಯ ಈ ರೀತಿಯ ವರ್ತನೆ ತೋರುವ ಮೂಲಕ ಖರ್ಗೆಯವರನ್ನು ಅಪಮಾನಿಸಿದ್ದಾರೆ ಎಂದು ಖರ್ಗೆ ಅವರ ಅಭಿಮಾನಿಗಳು ಗರಂ ಆಗಿದ್ದು ಟೀಕೆ ವ್ಯಕ್ತವಾಗಿದೆ.
Sign in to your account
Username or Email Address


Password

 Remember Me


