ಬೆಂಗಳೂರು: ದಲಿತರ ನಿರೀಕ್ಷೆಯನ್ನು ಹುಸಿ ಮಾಡಿ, ದಲಿತರ (Dalits) ಹೆಸರಲ್ಲಿ ಅಧಿಕಾರ ಅನುಭವಿಸಿದ್ದು ಮರೆತು ಹೋಯಿತಾ? ದಲಿತರಿಗೆ ಸಿದ್ದರಾಮಯ್ಯ (Siddaramaiah) ಅವರಿಂದ ಯಾವತ್ತಿಗೂ ಸಿಗುವುದು ಕುತಂತ್ರದ ಒಳ ಏಟು ಮಾತ್ರ ಎಂದು ಬಿಜೆಪಿ (BJP) ಕಿಡಿ ಕಾರಿದೆ.ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್‌ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ದಲಿತರ ನಿರೀಕ್ಷೆಯನ್ನು ಹುಸಿ ಮಾಡಿ, ದಲಿತರ ಹೆಸರಲ್ಲಿ ಅಧಿಕಾರ ಅನುಭವಿಸಿದ್ದು ಮರೆತು ಹೋಯಿತಾ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ವೇದಿಕೆ ಮೇಲೆ ಡಿಕೆಶಿ, ಸಿದ್ದು ಬಣದ ಕಿತ್ತಾಟ – ಕಣ್ಣೀರಿಟ್ಟು ವೇದಿಕೆಯಿಂದ ಇಳಿದ ನಾಯಕಿಮಾನ್ಯ @siddaramaiah ರವರು ಐದು ವರ್ಷ ಅಧಿಕಾರದಲ್ಲಿದ್ದಾಗಲೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಂದಿದೆ. ಆಗ ವರದಿ ಜಾರಿ ಮಾಡುವ ಬಗ್ಗೆ ಆಲೋಚಿಸದ ಪ್ರತಿಪಕ್ಷದ ನಾಯಕರು, ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಮಾತನಾಡುತ್ತಿರುವುದು ಹಾಸ್ಯಾಸ್ಪದ.— BJP Karnataka (@BJP4Karnataka) December 12, 2022ಟ್ವೀಟ್‌ನಲ್ಲಿ ಏನಿದೆ?
ಸಿದ್ದರಾಮಯ್ಯ ಅವರು ಐದು ವರ್ಷ ಅಧಿಕಾರದಲ್ಲಿದ್ದಾಗಲೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಂದಿದೆ. ಆಗ ವರದಿ ಜಾರಿ ಮಾಡುವ ಬಗ್ಗೆ ಆಲೋಚಿಸದ ಪ್ರತಿಪಕ್ಷದ ನಾಯಕರು, ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಇದನ್ನೂ ಓದಿ: ಬಾದಾಮಿ ಕ್ಷೇತ್ರದಲ್ಲೇ ಸಿದ್ದರಾಮಯ್ಯಗೆ ಬಹಿಷ್ಕಾರ..!ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಮಾದಿಗ ಸಮುದಾಯ ದೊಡ್ಡ ಸಮಾವೇಶವನ್ನು ಮಾಡಿ, ಆ ಸಂದರ್ಭದಲ್ಲಿ @siddaramaiah ಅವರು ನ್ಯಾ.‌ ಸದಾಶಿವ ಆಯೋಗದ ವರದಿ ಜಾರಿ ಮಾಡುವ ಘೋಷಣೆ ಮಾಡುತ್ತಾರೆಂಬ ದಲಿತರ ನಿರೀಕ್ಷೆಯನ್ನು ಹುಸಿ ಮಾಡಿ, ದಲಿತರ ಹೆಸರಲ್ಲಿ ಅಧಿಕಾರ ಅನುಭವಿಸಿದ್ದು ಮರೆತು ಹೋಯಿತಾ?— BJP Karnataka (@BJP4Karnataka) December 12, 2022ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಮಾದಿಗ ಸಮುದಾಯ ದೊಡ್ಡ ಸಮಾವೇಶವನ್ನು ಮಾಡಿ, ಆ ಸಂದರ್ಭದಲ್ಲಿ ಅವರು ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಮಾಡುವ ಘೋಷಣೆ ಮಾಡುತ್ತಾರೆಂಬ ದಲಿತರ ನಿರೀಕ್ಷೆಯನ್ನು ಹುಸಿ ಮಾಡಿ, ದಲಿತರ ಹೆಸರಲ್ಲಿ ಅಧಿಕಾರ ಅನುಭವಿಸಿದ್ದು ಮರೆತು ಹೋಯಿತಾ? ಈಗ ಸಿದ್ದರಾಮಯ್ಯನವರು ಮತ್ತೆ ದಲಿತರಿಗೆ ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಮಾಡುವ ಸುಳ್ಳು ಭರವಸೆ ನೀಡುತ್ತಿದ್ದು, ದಲಿತರ ಮೂಗಿಗೆ ತುಪ್ಪ ಸವರುವ ನಿಮ್ಮ ಸುಳ್ಳು ಭರವಸೆಯನ್ನು ಯಾವ ದಲಿತರು ನಂಬುವ ಸ್ಥಿತಿಯಲ್ಲಿಲ್ಲ.ಅಧಿಕಾರ ಇದ್ದಾಗ ಸಿದ್ದರಾಮಯ್ಯ ದಲಿತರ ಯಾವ ಬೇಡಿಕೆನೂ ಈಡೇರಿಸಿಲ್ಲ ಹಾಗೇ ಅವರಿಂದ ತುಳಿತಕ್ಕೆ ಒಳಗಾದ ದಲಿತ ನಾಯಕರ ಪಟ್ಟಿಗೂ ಕೊನೆಯಿಲ್ಲ.√ ಮಲ್ಲಿಕಾರ್ಜುನ‌ ಖರ್ಗೆ√ ಡಾ.ಜಿ.ಪರಮೇಶ್ವರ್√ ಮೋಟಮ್ಮ√ ಶ್ರೀನಿವಾಸ್ ಪ್ರಸಾದ್@siddaramaiah ಅವರ ದಲಿತಪರ ಪ್ರೀತಿ ಯಾವತ್ತಿಗೂ ತೋರ್ಪಡಿಕೆಗೆ ಅಷ್ಟೇ— BJP Karnataka (@BJP4Karnataka) December 12, 2022ಅಧಿಕಾರ ಇದ್ದಾಗ ಸಿದ್ದರಾಮಯ್ಯ ದಲಿತರ ಯಾವ ಬೇಡಿಕೆನೂ ಈಡೇರಿಸಿಲ್ಲ. ಹಾಗೇ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಡಾ.ಜಿ.ಪರಮೇಶ್ವರ್, ಮೋಟಮ್ಮ, ವಿ. ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಅವರಿಂದ ತುಳಿತಕ್ಕೆ ಒಳಗಾದ ದಲಿತ ನಾಯಕರ ಪಟ್ಟಿಗೂ ಕೊನೆಯಿಲ್ಲ. ಸಿದ್ದರಾಮಯ್ಯರ ದಲಿತಪರ ಪ್ರೀತಿ ಯಾವತ್ತಿಗೂ ತೋರ್ಪಡಿಕೆಗೆ ಅಷ್ಟೇಸಿದ್ದರಾಮಯ್ಯ ಅವರ ತೋರ್ಪಡಿಕೆಯ “ಅಹಿಂದ” ಹೋರಾಟದ ನಾಟಕದಲ್ಲಿ ಈಗ ದಲಿತರು ಇಲ್ಲ, ಹಿಂದುಳಿದವರೂ ಇಲ್ಲ. ಅವರ ವಕಾಲತ್ತೇನಿದ್ದರೂ ಒಂದು ಸಮುದಾಯದ ಪರ ಮಾತ್ರ. ಹಿಂದುಳಿದ ಹಾಗೂ ದಲಿತ ವರ್ಗಕ್ಕೆ ಸಿದ್ದರಾಮಯ್ಯ ಅವರಿಂದ ಯಾವತ್ತಿಗೂ ಸಿಗುವುದು ಕುತಂತ್ರದ ಒಳ ಏಟು ಮಾತ್ರ ಎಂದು ಆಕ್ರೋಶ ಹೊರಹಾಕಿದೆ.
Sign in to your account
Username or Email Address


Password

 Remember Me


