ಸಿಲಿಕಾನ್ ಸಿಟಿ ಈಗ ಕೂಲ್ ಕೂಲ್ ಆಗಿದೆ. ರಾಜಧಾನಿ ಸೇರಿದಂತೆ ಇಡೀ ರಾಜ್ಯ ಚಳಿಗಾಳಿಗೆ ತತ್ತರಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಎಂದಿನಂತೆ ಮೋಡ ಕವಿದ ಹಾಗೂ ಚಳಿಯ ವಾತಾವರಣವೂ ಮುಂದುವರಿಯಲಿದೆ.ಇನ್ನೂ ಮಾಂಡಸ್ ಚಂಡಮಾರುತ ಎಫೆಕ್ಟ್ನಿಂದಾಗಿ ದಕ್ಷಿಣ ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ಚಾಮರಾಜನಗರ, ಮೈಸೂರು, ದಾವಣಗೆರೆ, ತುಮಕೂರು, ಕೋಲಾರ ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದ್ದು, ಬೀದರ್, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಕೆಲ ಜಿಲ್ಲೆಗಳಲ್ಲಿ ಬಿಸಿಲು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ರಾಜಧಾನಿಯಲ್ಲಿಂದು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗರಿಷ್ಠ ಉಷ್ಣಾಂಷ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಆದರೆ ಮಡಿಕೇರಿಯಲ್ಲಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಮನಗರದಲ್ಲಿ ಕನಿಷ್ಠ 11 ಡಿಗ್ರಿ ಹಾಗೂ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.ನಗರಗಳ ಹವಾಮಾನ ವರದಿ:
ಬೆಂಗಳೂರು: 25-19
ಮಂಗಳೂರು: 28-24
ಶಿವಮೊಗ್ಗ: 27-21
ಬೆಳಗಾವಿ: 27-20
ಮೈಸೂರು: 26-19
ಮಂಡ್ಯ: 27-19ಮಡಿಕೇರಿ: 22-16
ರಾಮನಗರ: 26-11
ಹಾಸನ: 24-18
ಚಾಮರಾಜನಗರ: 26-20
ಚಿಕ್ಕಬಳ್ಳಾಪುರ: 24-19ಕೋಲಾರ: 24-19
ತುಮಕೂರು: 26-19
ಉಡುಪಿ: 29-24
ಕಾರವಾರ: 31-26
ಚಿಕ್ಕಮಗಳೂರು: 23-18
ದಾವಣಗೆರೆ: 27-21ಹುಬ್ಬಳ್ಳಿ: 27-21
ಚಿತ್ರದುರ್ಗ: 25-20
ಹಾವೇರಿ: 27-21
ಬಳ್ಳಾರಿ: 26-21
ಗದಗ: 27-21
ಕೊಪ್ಪಳ: 27-21ರಾಯಚೂರು: 27-21
ಯಾದಗಿರಿ: 28-22
ವಿಜಯಪುರ: 27-21
ಬೀದರ್: 27-20
ಕಲಬುರಗಿ: 28-21
ಬಾಗಲಕೋಟೆ: 27-21
Sign in to your account
Username or Email Address


Password

 Remember Me


