ಬಿಗ್ ಬಾಸ್ ಮನೆಯಲ್ಲಿ ಲವ್ ಬರ್ಡ್ಸ್ ಆಗಿ ಹೈಲೈಟ್ ಆಗಿದ್ದ ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ತಾವು ಕಳುಹಿಸಿರುವ ಬಟ್ಟೆ ಬಿಗ್ ಬಾಸ್, ರೂಪೇಶ್‌ಗೆ ನೀಡಿಲ್ಲ ಎಂದು ಸಾನ್ಯ ಗರಂ ಆಗಿ ಪೋಸ್ಟ್ ಹಾಕಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚ ಕೂಡ ದೊಡ್ಮನೆಯ ವೇದಿಕೆಯಲ್ಲಿ ಖಡಕ್ ಉತ್ತರ ಕೊಟ್ಟಿದ್ದಾರೆ.ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ಜೊತೆಯಾಗಿದ್ದ ಈ ಜೋಡಿ, ಸಾನ್ಯ ಎಲಿಮಿನೇಷನ್‌ನಿಂದ ರೂಪೇಶ್ ಕುಗ್ಗಿದ್ದರು. ಸಾನ್ಯ ಮಡಿಲಲ್ಲಿ ಅಂದು ರೂಪೇಶ್‌ ಬಿಕ್ಕಿ ಬಿಕ್ಕಿ ಅತ್ತಿದ್ದರು. ಈ ವೇಳೆ ತಮಗೆ ಪ್ರತಿ ವಾರ ಬಟ್ಟೆ ಕಳುಹಿಸಬೇಕು ಎಂದು ಸಾನ್ಯ ಬಳಿ ರೂಪೇಶ್ ಮನವಿ ಮಾಡಿದ್ದರು. ಅದರಂತೆ ಎರಡು ವಾರಗಳು ಬಟ್ಟೆಯನ್ನ ಸಾನ್ಯ ಕೂಡ ಕಳುಹಿಸಿದ್ದರು. ಇದಾದ ಬಳಿಕ ಸಾನ್ಯ ಕಳುಹಿಸಿರುವ ಬಟ್ಟೆ ರೂಪೇಶ್‌ಗೆ ತಲುಪಿರಲಿಲ್ಲ. ಇದರಿಂದ ಸಾನ್ಯ ಕೂಡ ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್‌ಗೆ ತರಾಟೆಗೆ ತೆಗೆದುಕೊಂಡಿದ್ದರು. ಈ ಎಲ್ಲದರ ಬೆಳವಣಿಗೆ ಕಿಚ್ಚ ಕೂಡ ಸಾನ್ಯ ಮೇಲೆ ವಾರದ ಮಾತುಕತೆಯಲ್ಲಿ ಗರಂ ಆಗಿದ್ದಾರೆ. ಈ ಕುರಿತು ರೂಪೇಶ್ ಬಳಿಯೇ ಕಿಚ್ಚ ಕ್ಲ್ಯಾರಿಟಿ ಕೇಳಿದ್ದಾರೆ. ಇದನ್ನೂ ಓದಿ: ಪ್ರಸಾದ್ ಬಿದ್ದಪ್ಪ ಪುತ್ರಿ ಜೊತೆ ಅಭಿಷೇಕ್‌ ಅಂಬರೀಶ್‌ ನಿಶ್ಚಿತಾರ್ಥನೀವು ಬಿಗ್ ಬಾಸ್ ಮನೆಗೆ ಹೋಗುವಾಗ ಇವರನ್ನೇ ಸಂಪರ್ಕಿಸಬೇಕು ಅಂತಾ ಹೇಳಿ ಹೋಗ್ತೀರಾ. ಏನೇ ವಿಚಾರ ಇದ್ದರೂ ನಿಮ್ಮ ಕುಟುಂಬಕ್ಕೆ ನಾವು ತಿಳಿಸುತ್ತೇವೆ. ಈಗ ಏನಾಗಿದೆ ಅಂದರೆ ನಿಮಗೆ ಎರಡು ಕಡೆಯಿಂದ ಬಟ್ಟೆ ಬರುತ್ತಿದೆ. ಒಂದು ಮನೆಯಿಂದ ಇನ್ನೊಂದು ನಿಮ್ಮ ಆಪ್ತರಾಗಿರುವಂತಹ ಸಾನ್ಯ ಅವರ ಕಡೆಯಿಂದ, ಸಾನ್ಯ ಹೇಳ್ತಾರೆ ಈ ಬಟ್ಟೆ ಅವರಿಗೆ ಕಳುಹಿಸಿ ಅಂತಾ ಅದು ನಿಮಗೆ ಬಂದಿದೆ. ಆದರೆ ಅದು ನಿಮ್ಮ ಮನೆಯವರಿಗೆ ಸಮಸ್ಯೆಯಿದೆ. ನಾನು ಕಳುಹಿಸಿರುವ ಬಟ್ಟೆ ನಿಮಗೆ ಹೋಗ್ತಾಯಿಲ್ಲ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಸಾನ್ಯ ಪೋಸ್ಟ್ ಮಾಡುತ್ತಾರೆ.ಸಾನ್ಯ ಅವರೇ ಬಿಗ್ ಬಾಸ್ ಮನೆಯಲ್ಲಿ ಇದ್ರಿ ತಾವೂ, ಬಿಗ್ ಬಾಸ್ ನೀವು ಅರ್ಥ ಮಾಡಿಕೊಂಡಿದ್ದೀರಾ ಅಂತಾ ಅಂದುಕೊಂಡಿದ್ವಿ. ಆದರೂ ಕೂಡ ಬಿಗ್ ಬಾಸ್ ನಿಮ್ಮ ಸ್ನೇಹವನ್ನ ಅರ್ಥಮಾಡಿಕೊಂಡು ಎರಡು ವಾರಗಳು ಬಟ್ಟೆಯನ್ನ ಕಳುಹಿಸಿ ಕೊಟ್ಟಿದ್ದಾರೆ ಎಂದು ಸಾನ್ಯಗೆ ಕಿಚ್ಚ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ನಿಮ್ಮ ಮನೆಯವರ ಎಮೋಷನ್ಸ್‌ಗೆ ನಾವು ಗೌರವ ಕೊಟ್ಟು ಅವರು ಹೇಳಿದಂತೆ ನಾವು ಫಾಲೋವ್ ಮಾಡೋದು ಕರೆಕ್ಟ್ ಅಥವಾ ತಪ್ಪಾ ರೂಪೇಶ್ ಅವರೇ ಎಂದು ಕಿಚ್ಚ ಪ್ರಶ್ನೆ ಮಾಡಿದ್ದಾರೆ. ನಮ್ಮ ಮನೆಯವರು ಏನೋ ಹೇಳ್ತಿದ್ದಾರೆ ಅಂದರೆ ಅದರಲ್ಲಿ ಒಂದು ಅರ್ಥವಿರುತ್ತದೆ.  ಸಾನ್ಯ ಸಾರಿ, ಮನೆಯಿಂದ ಹೊರಬಂದ ಮೇಲೆ ನಿನ್ನ ಜೊತೆ ಮಾತನಾಡುತ್ತೀನಿ. ನಿನ್ನ ಪ್ರೀತಿ ನನಗೆ ಅರ್ಥವಾಗುತ್ತದೆ. ನಾನು ಮನೆಯವರ ಪ್ರೀತಿಯಿಂದ ಇಲ್ಲಿಗೆ ಬಂದಿರೋದು, ಇಲ್ಲಿಗೆ ಬಂದ ಮೇಲೆ ನನಗೆ ಸಾನ್ಯ ಸ್ನೇಹ ಸಿಕ್ಕಿರೋದು. ಎರಡು ಕೂಡ ನನಗೆ ಮುಖ್ಯನೇ ಆದರೆ ಸದ್ಯಕ್ಕೆ ನನ್ನ ಮನೆಯವರು ಏನು ಹೇಳ್ತಾರೆ ಅನ್ನೋದನ್ನ ಫಾಲೋವ್ ಮಾಡ್ತೀನಿ. ಬಿಗ್ ಬಾಸ್‌ಗೆ ಬೇಜಾರು ಆಗಿರೋದು ನನಗೂ ಬೇಜಾರಾಗಿದೆ ಎಂದು ಈ ವೇಳೆ ರೂಪೇಶ್ ಕ್ಷಮೆಯಾಚಿಸಿದ್ದಾರೆ.
Sign in to your account
Username or Email Address


Password

 Remember Me


