ಕೊಪ್ಪಳ: ಬಡಕುಟುಂಬಗಳನ್ನೇ ಟಾರ್ಗೆಟ್ ಮಾಡಿ ಕ್ರೈಸ್ತ ಧರ್ಮಕ್ಕೆ (Christianity) ಮತಾಂತರಿಸುತ್ತಿದ್ದ ಪ್ರಕರಣವೊಂದು ಕೊಪ್ಪಳ (Koppala) ಜಿಲ್ಲೆಯ ಕಾರಟಗಿ ಪೊಲೀಸ್ ಠಾಣಾ (Police Station) ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಜಿಲ್ಲೆಯಲ್ಲಿ ಬಲವಂತದ ಮತಾಂತರ ಹಾಗೂ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಚರ್ಚ್ ಪಾಸ್ಟರ್ (Church Pastor) ಸತ್ಯನಾರಾಯಣ ಅಲಿಯಾಸ್ ಸ್ಯಾಮುಯೇಲ್ ಮತ್ತು ಪತ್ನಿ ಹಾಗೂ ಮಗ ಚಿರಂಜೀವಿ (17) ವಿರುದ್ಧ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ಆರೋಪ – ಸರ್ಕಲ್‌ ಇನ್‌ಸ್ಪೆಕ್ಟರ್‌ ಸೇರಿ 7 ಮಂದಿ ವಿರುದ್ಧ FIRಕರಟಗಿಯ ರಾಮನಗರದಲ್ಲಿ ಗ್ರೇಸ್ ಪ್ರಾರ್ಥನಾ ಮಂದಿರ ನಡೆಸುತ್ತಿರುವ ಸ್ಯಾಮುಯೇಲ್, ಬಡವರನ್ನೇ ಟಾರ್ಗೆಟ್ ಮಾಡಿ ಕ್ರೈಸ್ತಧರ್ಮಕ್ಕೆ ಮತಾಂತರ ಮಾಡುತ್ತಿದ್ದ. ಹಿಂದೂ ದೇವತೆಗಳನ್ನ (Hindus God) ನದಿಯಲ್ಲಿ ಎಸೆಯುವಂತೆ ಹೇಳುತ್ತಿದ್ದ. ಅಲ್ಲದೇ ಮತಾಂತರವಾಗಿ ಹಿಂದೂ ದೇವರನ್ನ ಪೂಜೆ ಮಾಡಿದ್ರೆ ಕೊಲೆ, ಅತ್ಯಾಚಾರ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ 4 ವರ್ಷಗಳ ಹಿಂದೆಯೇ ಮತಾಂತರಗೊಂಡ ಬಡ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ದೂರಿನ ಅನ್ವಯ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಅತ್ಯಾಚಾರ ಪ್ರಕರಣವನ್ನೂ ಬಯಲಿಗೆಳೆದಿದ್ದಾರೆ. ಚರ್ಚ್ ಪಾಸ್ಟರ್‌ನ 17 ವರ್ಷದ ಮಗನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ ಆಗಿರುವುದು ಕಂಡುಬಂದಿದೆ. ಇದನ್ನೂ ಓದಿ: ಕಿರುಕುಳ ವಿರೋಧಿಸಿದ್ದಕ್ಕೆ ತಾಯಿ ಮಗುವನ್ನು ಹೊರದೂಡಿದ ಕ್ಯಾಬ್ ಚಾಲಕ- ಮಗು ಸಾವುಶ್ರೀರಾಮನಗರದಲ್ಲಿ ಗ್ರೇಸ್ ಪ್ರಾರ್ಥನಾ ಮಂದಿರವನ್ನ ನಡೆಸುತ್ತಿರುವ ಸ್ಯಾಮುಯೇಲ್ ಹಾಗೂ ಪತ್ನಿ ಹೆದರಿಸಿ, ಬೆದರಿಸಿ ಮತಾಂತರ ಮಾಡುತ್ತಿದ್ದರು. ಈ ವೇಳೆ ಚರ್ಚ್‌ನಲ್ಲಿ ಉಚಿತ ಸೇವೆ ನೀಡುವುದಾಗಿ ಬಡ ಕುಟುಂಬದ ಅಪ್ರಾಪ್ತೆಯನ್ನ ಕರೆಸಿ, ಮದುವೆಯಾಗುವುದಾಗಿ ನಂಬಿಸಿದ್ದ ಪಾಸ್ಟರ್ ಮಗ ಚಿರಂಜೀವಿ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Sign in to your account
Username or Email Address


Password

 Remember Me


