ಚಿಕ್ಕೋಡಿ: ರಜೆ ಸಿಕ್ಕಿತು ಎಂದು ಖುಷಿಯಿಂದ ಹೊರಟಿದ್ದ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿಯ ಯೋಧ (Soldier) ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ತುಂಡ್ಲಾ ರೈಲು ನಿಲ್ದಾಣದಲ್ಲಿ ನಡೆದಿದೆ.ರಾಜೇಂದ್ರ ಪಾಂಡುರಂಗ ಕುಂಬಾರ (45) ಮೃತ ಯೋಧ. ನಿಪ್ಪಾಣಿಯ ಭಾರತೀಯ ಸೇನೆಯ ಯೋಧ ರಾಜೇಂದ್ರ ಪಾಂಡುರಂಗ ಅಪಘಾತದಲ್ಲಿ ಉತ್ತರ ಪ್ರದೇಶದಲ್ಲಿ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾನೆ. ಕಳೆದ 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಯೋಧನಾಗಿ ರಾಜೇಂದ್ರ ಸೇವೆ ಸಲ್ಲಿಸುತ್ತಿದ್ದರು. ಕಳೆದ ತಿಂಗಳಷ್ಟೆ ದೆಹಲಿಯಿಂದ ಉತ್ತರ ಪ್ರದೇಶದ ಪ್ರಯಾಗರಾಜ್‌ಗೆ ವರ್ಗವಾಗಿದ್ದ ಯೋಧ ಮನೆಗೆ ಬರಲು 15 ದಿನ ರಜೆ ಪಡೆದು ಊರಿಗೆ ಹೊರಟಿದ್ದ‌. ಇದನ್ನೂ ಓದಿ: ಶಾಸಕಾಂಗ ಪಕ್ಷದ ನಾಯಕನಾಗಿ ಭೂಪೇಂದ್ರ ಪಟೇಲ್ ಆಯ್ಕೆ- ಸೋಮವಾರ ಪ್ರಮಾಣವಚನತುಂಡ್ಲಾ ರೈಲು ನಿಲ್ದಾಣದಲ್ಲಿ ಒಂದು ರೈಲು ಇಳಿದು ಮತ್ತೊಂದು ರೈಲು ಹತ್ತುವಾಗ ಅಪಘಾತ ಸಂಭವಿಸಿ ಯೋಧ ಸಾವನ್ನಪ್ಪಿದ್ದಾನೆ. ತುಂಡ್ಲಾದಿಂದ ದೆಹಲಿಗೆ ಬಂದಿರುವ ರಾಜೇಂದ್ರ ಕುಂಬಾರ ಅವರ ಪಾರ್ಥಿವ ಶರೀರ ತರಲಾಗಿದ್ದು, ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ದೆಹಲಿಯಿಂದ ಬೆಳಗಾವಿಗೆ ತರುವ ಸಾಧ್ಯತೆಯಿದೆ. ಯೋಧನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಿಪ್ಪಾಣಿಯಲ್ಲಿ ಶೋಕ‌ ಮಡಿಗಟ್ಟಿದೆ. ಇದನ್ನೂ ಓದಿ: ಪುಟ್ಟರಾಜು ಎಚ್ಚರಿಕೆಯ ಬೆನ್ನಲ್ಲೇ ಪ್ರತಾಪ್ ಸಿಂಹ ರಸ್ತೆ ವೀಕ್ಷಣೆ
Sign in to your account
Username or Email Address


Password

 Remember Me


