ಚಿತ್ರರಂಗದ ದಿ ಬೆಸ್ಟ್ ಕಪಲ್ ಅಂದ್ರೆ ಯಶ್ (Yash) ಮತ್ತು ರಾಧಿಕಾ ಪಂಡಿತ್,(Radhika Pandit) ತಮ್ಮ ದಾಂಪತ್ಯ ಜೀವನವು ಆರು ವರ್ಷಗಳನ್ನ ಪೂರೈಸಿರುವ ಖುಷಿಯಲ್ಲಿ ಯಶ್ ಜೊತೆಗಿನ ವೈವಾಹಿಕ ಜೀವನದ ಬಗ್ಗೆ ರಾಧಿಕಾ ಪಂಡಿತ್ ಪ್ರೀತಿಯಿಂದ ಪತಿಗೆ ವಿಶ್ ಮಾಡಿದ್ದಾರೆ. ಈ ಕುರಿತ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.ಸೀರಿಯಲ್ ಟು ಸಿನಿಮಾವೆರೆಗೂ ಜೊತೆಯಾಗಿದ್ದ ಜೋಡಿ ಯಶ್ ಮತ್ತು ರಾಧಿಕಾ, ಪ್ರೀತಿಸಿ 2016ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈಗ ಯಶ್, ರಾಧಿಕಾ ಪ್ರೀತಿಯ ಪಯಣಕ್ಕೆ 6 ವರ್ಷಗಳ ಸಂಭ್ರಮವಾಗಿದ್ದು, ಪತಿ ಯಶ್ ಪ್ರೀತಿಯಿಂದ ವಾರ್ಷಿಕೋತ್ಸವಕ್ಕೆ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಹುಡುಗಿಯ ಜೊತೆ ಸಲ್ಮಾನ್ ಖಾನ್‌ಗೆ ಪ್ಯಾರ್  A post shared by Radhika Pandit (@iamradhikapandit)ಇದು ನಾವು.. ಸ್ವಲ್ಪ ಫಿಲ್ಮಿ, ಸ್ವಲ್ಪ ಪ್ಲೇಫುಲ್, ಸ್ವಲ್ಪ ಧಾರ್ಮಿಕ, ಸ್ವಲ್ಪ ಸೀರಿಯಸ್ ಅದರೆ ತುಂಬಾ ರಿಯಲ್. ಈ 6 ವರ್ಷವನ್ನು ಬ್ಯೂಟಿಫುಲ್ ಮಾಡಿದಕ್ಕೆ ಥ್ಯಾಂಕ್ಸ್. ನಿಮ್ಮ ಜೊತೆ ನನ್ನ ಜೀವನ ಮ್ಯಾಜಿಕಲ್ ಮತ್ತು ರಿಯಲ್. ಹ್ಯಾಪಿ ಅನಿವರ್ಸರಿ ಲವ್ ಯು ಎಂದು ರಾಧಿಕಾ(Radhika Pandit) ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್‌ಗೆ ಫ್ಯಾನ್ಸ್‌ ಶುಭಹಾರೈಸಿದ್ದಾರೆ.
Sign in to your account
Username or Email Address


Password

 Remember Me


