ಸ್ಯಾಂಡಲ್‌ವುಡ್ (Sandalwood) ನಟಿ ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹ (Vasista Simha) ಜೋಡಿ ಇತ್ತೀಚೆಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಬಳಿಕ ಇಬ್ಬರು ಕ್ರಿಯೇಟಿವ್ ಪೋಸ್ಟ್ ಮೂಲಕ ತಮ್ಮ ಪ್ರೀತಿಯ ಬಗ್ಗೆ ತಿಳಿಸಿದ್ದರು. ಇದೀಗ ಈ ಜೋಡಿಯ ಎಂಗೇಜ್‌ಮೆಂಟ್ ಫೋಟೋಗಳು ಸದ್ದು ಮಾಡ್ತಿದೆ.ಚಂದನವನದ ಸದ್ಯದ ಹಾಟ್ ನ್ಯೂಸ್ ಎಂದರೆ ಹರಿಪ್ರಿಯಾ ಮತ್ತು ವಸಿಷ್ಠ ಜೋಡಿಯ ಪ್ರೇಮ ಕಹಾನಿ. ಇವರಿಬ್ಬರ ಲವ್ ಸ್ಟೋರಿ ವಿಚಾರ ಇದೀಗ ಗುಟ್ಟಾಗಿ ಉಳಿದಿಲ್ಲ. ಸತತ ಆರು ವರ್ಷಗಳ ಸ್ನೇಹ ಈಗ ಮದುವೆಯ ಬಂಧಕ್ಕೆ ಹೊಸ ಮುನ್ನುಡಿ ಬರೆದಿದೆ. ಹರಿಪ್ರಿಯಾ, ವಸಿಷ್ಠ ನಿಶ್ಚಿತಾರ್ಥದ ರೊಮ್ಯಾಂಟಿಕ್ ಫೋಟೋ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.`ಗೋಧಿ ಬಣ್ಣ ಸಾಧಾರಣ ಮೈಕಟ್ಟು’ (Godhi Banna Sadarana Maikattu) ಸಿನಿಮಾ ವೇಳೆ ಇವರಿಬ್ಬರ ಗೆಳೆತನವಾಗಿತ್ತು. ಬಳಿಕ ತೆಲುಗಿನ `ಎವರು’ ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದು, ಈ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇದನ್ನೂ ಓದಿ: ‘ಅನ್ ಲಾಕ್ ರಾಘವ’ ಸಿನಿಮಾಗೆ ಕೊನೆ ಹಂತದ ಶೂಟಿಂಗ್ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ʻಸಿಂಹಪ್ರಿಯʼ (Simhapriya) ಜೋಡಿ ಮುಂದಿನ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಹಸೆಮಣೆ ಏರಲಿದ್ದಾರೆ.Live Tv
[brid partner=56869869 player=32851 video=960834 autoplay=true]
Sign in to your account
Username or Email Address


Password

 Remember Me


