ಸ್ಯಾಂಡಲ್‌ವುಡ್ ನಟಿ ಪ್ರಣಿತಾ (Pranitha Subhash) ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಚೆಂದದ ಫೋಟೋಶೂಟ್‌ವೊಂದನ್ನ ಮಾಡಿಸಿದ್ದಾರೆ. ದಂತದ ಗೊಂಬೆಯಂತೆ ಫೋಟೋಗೆ ನಟಿ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.  A post shared by Pranita Subhash (@pranitha.insta)`ಪೊರ್ಕಿ’ (Porki) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟ ನಟಿ ಪ್ರಣಿತಾ, ಬಹುಭಾಷಾ ನಾಯಕಿಯಾಗಿ ಮಿರ ಮಿರ ಅಂತಾ ಮಿಂಚಿದ್ದರು. ಕಳೆದ ವರ್ಷ ಬಹುಕಾಲದ ಗೆಳೆಯ ನಿತಿನ್ (Nitin) ಜೊತೆ ಹಸೆಮಣೆ ಏರಿದ್ದರು. ಈಗ ಮುದ್ದು ಮಗಳ ಎಂಟ್ರಿಯಾಗಿದೆ. ಮದುವೆ ಆಗಿ, ತಾಯಿಯಾಗಿದ್ದರೂ ಕೂಡ ನಟಿಯ ಗ್ಲಾಮರ್ ಒಂದಚೂರು ಕಮ್ಮಿಯಾಗಿಲ್ಲ. ಮದುವೆ ನಂತರ ಮತ್ತಷ್ಟು ಸುಂದರವಾಗಿ ನಟಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ: ವಸಿಷ್ಠನ ಮದುವೆ ವಿಚಾರ ಮಾತಾಡಬೇಡಿ ನೋವಾಗುತ್ತೆ ಎಂದ ಡಾಲಿ  A post shared by Pranita Subhash (@pranitha.insta)ಇದೀಗ ಹೊಸ ಫೋಟೋಶೂಟ್ ಮೂಲಕ ನಟಿ ಪ್ರಣಿತಾ ಮಿಂಚಿದ್ದಾರೆ. ಬಳಕುವ ಬಳ್ಳಿಯಂತೆ ನಟಿ ಕಾಣಿಸಿಕೊಂಡಿದ್ದಾರೆ. ಆರೆಂಜ್ ಕಲರ್ ಟಾಪ್‌ನಲ್ಲಿ ಬಿಳಿ ಬಣ್ಣದ ಹೂವು ಹಿಡಿದು ದಂತದ ಗೊಂಬೆಯಂತೆ ಕಂಗೊಳಿಸಿದ್ದಾರೆ. ನಟಿಯ ಹೊಸ ಲುಕ್ ನೋಡಿರುವ ನೆಟ್ಟಿಗರು ಸಂತೂರ್ ಮಮ್ಮಿ ಎಂದು ಕಾಮೆಂಟ್ ಮಾಡ್ತಿದ್ದಾರೆ.ಇನ್ನೂ ಪ್ರಣಿತಾ ಸುಭಾಷ್ ನಟನೆಯ `ರಾಮನ ಅವತಾರ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ.

Live Tv
[brid partner=56869869 player=32851 video=960834 autoplay=true]










 Advertisement 





Live Tv
[brid partner=56869869 player=32851 video=960834 autoplay=true]








 Advertisement 




Sign in to your account
Username or Email Address


Password

 Remember Me


