ಬಾಲಿವುಡ್‌ನ (Bollywood) ಸ್ಟಾರ್ ನಟ ಸಲ್ಮಾನ್ ಖಾನ್‌ಗೆ (Salman Khan) ಮತ್ತೆ ಲವ್ವಾಗಿದೆ. ಮತ್ತೆ ಕರಾವಳಿ ಬ್ಯೂಟಿ ಜೊತೆ ಸಲ್ಲು ಭಾಯ್‌ಗೆ ಪ್ಯಾರ್ ಆಗಿದೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಸಾಕಷ್ಟು ಸಮಯದಿಂದ ಕನ್ನಡದ ಹುಡುಗಿ ಪೂಜಾ ಹೆಗ್ಡೆ (Pooja Hegde) ಜೊತೆ ಸಲ್ಲು ಡೇಟಿಂಗ್ ಮಾಡ್ತಿದ್ದಾರೆ.ಬಿಟೌನ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂದ್ರೆ ಸಲ್ಮಾನ್ ಖಾನ್, ಇಷ್ಟು ಸಿಂಗಲ್ ಆಗಿದ್ದ ನಟ ಈಗ ಎಂಗೇಜ್ ಆಗಿದ್ದಾರಂತೆ. ಸಲ್ಲು ಜೊತೆ ಸಾಕಷ್ಟು ನಟಿಮಣಿಯರ ಹೆಸರನ್ನ ಈ ಹಿಂದೆ ಕೇಳಿದ್ದೀವಿ. ಅದರಲ್ಲೂ ಕತ್ರಿನಾ ಕೈಫ್ ಮತ್ತು ಐಶ್ವರ್ಯ ರೈ ಜೊತೆ ಸಲ್ಮಾನ್ ಖಾನ್ ಹೆಸರು ಸಖತ್ ಸದ್ದು ಮಾಡಿತ್ತು. ಇದೀಗ ಕರ್ನಾಟಕದ ಹುಡುಗಿ ಪೂಜಾ ಹೆಗ್ಡೆ ಜೊತೆ ಸಲ್ಮಾನ್ ಖಾನ್ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದನ್ನೂ ಓದಿ: ಅನಿರುದ್ಧ ಹೊಸ ಧಾರಾವಾಹಿಗೆ ನಿರ್ಮಾಪಕರ ಸಂಘದಿಂದ ತೀವ್ರ ವಿರೋಧBREAKING NEWS : New Couple in Town !!! Mega Star #SalmanKhan fell in love with #PoojaHegde !! His production house also signed her for next 2 films !! They are spending time together now a days !! Confirmed by Salman Khan close sources. pic.twitter.com/2lkNIXH3IE— Umair Sandhu (@UmairSandu) December 7, 2022ಹಾಗಾಗಿ ಮುಂದಿನ ತಮ್ಮ ಎರಡು ಸಿನಿಮಾಗಳಿಗೆ ಪೂಜಾರನ್ನೇ ನಾಯಕಿಯಾಗಿ ಸಲ್ಮಾನ್ ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ಬಾಲಿವುಡ್ ಕಾಂಟ್ರವರ್ಸಿಯಲ್ ವಿಮರ್ಶಕ ಉಮೈರ್ ಸಂಧು ಸೋಷಿಯಲ್ ಮೀಡಿಯಾದಲ್ಲಿ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.ಅಷ್ಟಕ್ಕೂ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಡೇಟಿಂಗ್ ವಿಚಾರ ನಿಜವೇ ಎಂಬ ಪ್ರಶ್ನೆಗೆ ಅಧಿಕೃತ ಅಪ್ಡೇಟ್ ಸಿಗುವವರೆಗೂ ಕಾಯಬೇಕಿದೆ.
Sign in to your account
Username or Email Address


Password

 Remember Me


