ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಟ್ರೋಲ್ ಆಗಿರುವ ನಟಿ ಅಂದ್ರೆ ರಶ್ಮಿಕಾ ಮಂದಣ್ಣ ಆದರೆ ಇತ್ತೀಚೆಗೆ ನಿವೇದಿತಾ ಗೌಡ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಮೆಣಸಿನ ಕಾಯಿ ಬಜ್ಜಿ ಮಾಡಿದ್ದ ವೀಡಿಯೋ ಮೂಲಕ ನಿವಿ ಈಗ ಸಖತ್ ಹಿಗ್ಗಾಮುಗ್ಗ ಟ್ರೋಲ್ ಆಗಿದ್ದಾರೆ.ಕನ್ನಡದ `ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಅದ್ಯಾವಾಗ ಎಂಟ್ರಿ ಕೊಟ್ರೋ ಅಂದಿನಿಂದ ಇಂದಿನವರೆಗೂ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದಾರೆ. ಈ ಸಾಲಿಗೆ ನಿವೇದಿತಾ ಗೌಡ ಕೂಡ ಸೇರಿದ್ದಾರೆ. ರಶ್ಮಿಕಾ ನಂತರ ಅತೀ ಹೆಚ್ಚು ಟ್ರೋಲ್‌ ಆಗಿರುವ ನಟಿ ನಿವೇದಿತಾ ಅವರಾಗಿದ್ದು, ಕಳೆದ ಬಾರಿ ಒಂಟಿಯಾಗಿ ಬಾಲಿಗೆ ಹೋಗಿದ್ದ ನಿವಿಗೆ, ಚಂದನ್ ಎಲ್ಲಿ ಎಂದು ಸಖತ್ ಚರ್ಚೆಗೆ ಗ್ರಾಸವಾಗಿದ್ದರು. ಈಗ ಮೆಣಸಿನಕಾಯಿ ಬಜ್ಜಿ ಮಾಡಿರುವ ಪರಿಣಾಮ, ನಟಿ ಟ್ರೋಲ್ ಆಗಿದ್ದಾರೆ.ನಿವೇದಿತಾಗೆ ಅಡುಗೆ ಅಷ್ಟಾಗಿ ಬರೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಗೊತ್ತಿಲ್ಲದ್ದನ್ನು ತಿಳಿದುಕೊಳ್ಳುವ ಗುಣವಿದೆ. ಅವರದ್ದೇ ಸ್ಟೈಲಿನಲ್ಲಿ, ಕಾರದ ಮೆಣಸಿನಕಾಯಿ ಬಜ್ಜಿ ಮಾಡಿರುವ ರೀತಿ ಈಗ ಟ್ರೋಲಿಗರಿಗೆ ಆಹಾರವಾಗಿದೆ. ಅಡುಗೆಯ ವೀಡಿಯೋ ತಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್ಲೋಡ್‌ ಮಾಡಿ ನಟಿ ಟ್ರೋಲ್‌ ಆಗಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಚಿತ್ರದಲ್ಲಿ ಅಬ್ಬರಿಸಲಿದ್ದಾರಾ ರಾಣಾ ದಗ್ಗುಭಾಟಿ?ನಿವೇದಿತಾ ಮಾತು, ಅಡುಗೆ ಎಲ್ಲವೂ ನೋಡಿ ರಶ್ಮಿಕಾ ಮುಂದಿನ ವರ್ಷನ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
Sign in to your account
Username or Email Address


Password

 Remember Me


