ಸ್ಯಾಂಡಲ್‌ವುಡ್‌ನ ಸಾಕಷ್ಟು ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹಾಗಾಗಿ ಡಾಲಿ (Dali) ಮದುವೆ ಯಾವಾಗ ಎಂದು ಸಂದರ್ಶನವೊಂದರಲ್ಲಿ ಕೇಳಲಾಗಿದೆ. ಈ ವೇಳೆ ವಸಿಷ್ಠನ (Vasista Simha) ಮದುವೆ ಸುದ್ದಿ ಕೇಳಿ ಶಾಕ್ ಆಗಿದ್ದೀನಿ ಎಂದು ಡಾಲಿ ಮಾತನಾಡಿದ್ದಾರೆ.ಚಿತ್ರರಂಗದಲ್ಲಿ ನಟ, ನಿರ್ಮಾಪಕ, ಗೀತರಚನೆಕಾರನಾಗಿ ಡಾಲಿ ಸೈ ಎನಿಸಿಕೊಂಡಿದ್ದಾರೆ. ಡಾಲಿ ಎಲ್ಲೇ ಹೋದರು ಮದುವೆ ಯಾವಾಗ ಎಂಬ ಚರ್ಚೆ ಆಗುತ್ತಲೇ ಇರುತ್ತದೆ. ಹೀಗಿರುವಾಗ ಸಿನಿಮಾ ಪ್ರೆಸ್ ಮೀಟ್‌ವೊಂದರಲ್ಲಿ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ ಡಾಲಿಗೆ ಎದುರಾಗಿದೆ.ಎಲ್ಲರೂ ಮದುವೆ ವಿಚಾರ ಕೇಳಿ ಕೇಳಿ ಟಾರ್ಚರ್ ಕೊಡ್ತಿದ್ದಾರೆ. ವಸಿಷ್ಠನ ಎಂಗೇಜ್‌ಮೆಂಟ್ ಆದ ಮೇಲೆ ತುಂಬಾ ಹಿಂಸೆ ಕೊಡ್ತಿದ್ದಾರೆ. ದಯವಿಟ್ಟು ಆ ಪ್ರಶ್ನೆ ಕೇಳಬೇಡಿ ನೋವಾಗುತ್ತದೆ ಎಂದು ಡಾಲಿ ಹೇಳಿದ್ದಾರೆ. ಈ ವೇಳೆ ನಿಮಗೂ ವಸಿಷ್ಠ ಅವರು ಎಂಗೇಜ್ ಆಗಿರುವ ವಿಷ್ಯ ತಿಳಿದಿತ್ತಾ ಎಂದು ಕೇಳಲಾಗಿದೆ. ಈ ವಿಚಾರ ನನಗೆ ಹೇಗೆ ಗೊತ್ತಿರುತ್ತೆ, ನನಗೂ ಇದು ಸರ್ಪೈಸ್. ಇದನ್ನೂ ಓದಿ:  ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್ವಸಿಷ್ಠ (Vasista Simha) ಸಿಗಲಿ ಅಂತಾ ಕಾಯ್ತಿದ್ದೀನಿ. ಅವನು ಯಾಕೆ ಸಿಗ್ತಾಯಿಲ್ಲ ಅಂತಾ ಯೋಚನೆ ಮಾಡ್ತಿದ್ದೇ, ಈಗ ಗೊತ್ತಾಯ್ತು ಎಂದಿದ್ದಾರೆ. ವಸಿಷ್ಠನ ಮದುವೆ ವಿಚಾರ ಕೇಳಿ ಶಾಕ್ ಆಯ್ತು ಎಂದು ಡಾಲಿ ನಗುತ್ತಲೇ ರಿಯಾಕ್ಟ್ ಮಾಡಿದ್ದಾರೆ. ಸಾಕಷ್ಟು ವರ್ಷಗಳಿಂದ ಡಾಲಿ (Dhananjay) ಮತ್ತು ವಸಿಷ್ಠ ಗೆಳೆಯರಾಗಿದ್ದು, ನನಗೂ ಕೂಡ ಅವರ ಮದುವೆ ವಿಷ್ಯ ಗೊತ್ತಿರಲಿಲ್ಲ ಎಂದು ಹೇಳುವ ಮೂಲಕ ಡಾಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.ನಾನು ಮದುವೆ ಆಗುವಾಗ ಎಲ್ಲರಿಗೂ ತಿಳಿಸಿಯೇ ಮದುವೆ ಆಗುತ್ತೇನೆ. ಸದ್ಯಕ್ಕೆ ತನ್ನ ಮದುವೆಯ ಯೋಚನೆ ಇಲ್ಲಾ ಎಂದು ಡಾಲಿ ಮಾತನಾಡಿದ್ದಾರೆ.
Sign in to your account
Username or Email Address


Password

 Remember Me


