ಬೆಂಗಳೂರು: ನಗರದ ಪ್ರಸಿದ್ಧ ರಿಯಲ್‌ ಎಸ್ಟೇಟ್‌ ಕಂಪನಿ ಮಾನ್ಯತಾ ಗ್ರೂಪ್‌(Manyata Group) ಮೇಲೆ ಜಾರಿ ನಿರ್ದೇಶನಾಲಯ(Enforcement Directorate) ದಾಳಿ ನಡೆಸಿದೆ.ಬೆಂಗಳೂರಿನ ರಿಚ್ಮಂಡ್‌ ರೋಡ್‌ನಲ್ಲಿರುವ ಕೇಂದ್ರ ಕಚೇರಿಯೂ ಸೇರಿದಂತೆ ಹಲವು ಕಡೆ ಇದು ಮುಂಜಾನೆಯಿಂದಲೇ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.ಇನ್ನೋವಾ ಕಾರುಗಳಲ್ಲಿ ಆಗಮಿಸಿದ ಇಡಿ ತಂಡ ತಂಡ ಸಂಸ್ಥೆಯ ಮುಖ್ಯಸ್ಥರಿಗೆ ಸೇರಿದ ಸದಾಶಿವ ನಗರ ಮನೆ ಮೇಲೆಯೂ ದಾಳಿ ಮಾಡಿದೆ. ಇದನ್ನೂ ಓದಿ: ಹೆಲ್ಮೆಟ್ ಧರಿಸದ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡುತ್ತೇನೆ: SP ಹರಿರಾಂ ಶಂಕರ್ ಎಚ್ಚರಿಕೆಮಾನ್ಯತಾ ಪ್ರೊಜೆಕ್ಟ್ ಪ್ರೈವೇಟ್ ಲಿಮಿಟೆಡ್, ಮಾನ್ಯತಾ ಪ್ರಮೋಟರ್ಸ್, ರೆಡ್ಡಿ ವೀರಣ್ಣ ಇನ್‌ವೆಸ್ಟ್‌ಮೆಂಟ್, ರೆಡ್ಡಿ ವೀರಣ್ಣ ಕನ್‌ಸ್ಟ್ರಕ್ಷನ್, ಮಾನ್ಯತಾ ಡೆವಲಪರ್ಸ್, ಮಾನ್ಯತಾ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಪ್ರೈವೇಟ್ ಲಿಮಿಟೆಡ್ ಕಂಪನಿಗಳ ಮೇಲೆ ದಾಳಿ ನಡೆದಿದೆ.ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಕ್ರಮ ನಡೆಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡಸಲಾಗುತ್ತಿದೆ.
Sign in to your account
Username or Email Address


Password

 Remember Me


