ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ವಿಜಯಪುರ ಜಿಲ್ಲಾ ಸಿಂದಗಿ ತಾಲೂಕಿನ ಸಿಪಿಐ ಹಾಗೂ ಅವರ ಪತ್ನಿ ಸಾವಿಗೀಡಾಗಿದ್ದಾರೆ.ಬುಧವಾರ ಮಧ್ಯಾಹ್ನ ನೆಲೋಗಿ ಕ್ರಾಸ್ ಬಳಿ ನಿಂತಿದ್ದ, ಕಂಟೇನರ್ ಗೆ ಮಾರುತಿ ಸ್ವಿಫ್ಟ್ ಡಿಸೈರ್ ಕಾರು (Swift Desire Car) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಿಪಿಐ ರವಿ ಉಕ್ಕುಂದ (43), ಪತ್ನಿ ಮಧು (40) ದುರ್ಮರಣ ಹೊಂದಿದ್ದಾರೆ. ಇದನ್ನೂ ಓದಿ: 108 ಅಂಬುಲೆನ್ಸ್ ಸಿಬ್ಬಂದಿ ಉದ್ಧಟತನ – ಗಾಯಾಳುವನ್ನು ಅಪಘಾತದ ಸ್ಥಳದಲ್ಲೇ ಬಿಟ್ಟು ವಾಪಸ್ಸಿಂದಗಿಯಿಂದ ಕಲಬುರಗಿ ನಗರಕ್ಕೆ ಕಾರಿನಲ್ಲಿ ಆಗಮಿಸುತ್ತಿದ್ದ ಸಿಪಿಐ ದಂಪತಿ, ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ದೌಡಾಯಿಸಿದ್ದು, ನೆಲೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Sign in to your account
Username or Email Address


Password

 Remember Me


