ಬೆಂಗಳೂರು: ನೀವೆನಾದ್ರೂ ಇನ್ಮುಂದೆ ಸಾಕು ನಾಯಿಗಳನ್ನು (Dog) ಹೊರಬಿಟ್ರೆ ಅದರ ಕಡೆ ಗಮನವಿಡಿ. ಏಕೆಂದರೆ ನಿಮಗೆ ಗೊತ್ತಿಲ್ದೇ ಶ್ವಾನಕ್ಕೆ ಬಿಸ್ಕತ್ ಹಾಕಿ ಕಳ್ಳತನ ಮಾಡ್ತಾರೆ ಜೋಕೆ. ಹೀಗೊಂದು ಘಟನೆ ಬೆಂಗಳೂರಿನಲ್ಲಿ (Bengaluru) ಪತ್ತೆಯಾಗಿದೆ.ಕಳೆದ ಒಂದು ವಾರದ ಹಿಂದೆ ಮಾರತಹಳ್ಳಿಯ ಬಿಆರ್ ಲೇಔಟ್‍ನಲ್ಲಿ ಮುರಳಿ ಮಾಧವ್ ಎಂಬುವವರ ಸಾಕು ನಾಯಿಯನ್ನು ಖದೀಮನೊಬ್ಬ ಕದ್ದು ಎಸ್ಕೇಪ್ ಆಗಿದ್ದಾನೆ. ಇದೀಗ ಈ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿ ಸಾಕು ನಾಯಿಗೆ ಬಿಸ್ಕತ್ ಹಾಕ್ತಿರೋ ಆ ವ್ಯಕ್ತಿನಾ ನೋಡಿದ್ರೆ, ಶ್ವಾನಪ್ರಿಯ ಅನ್ಕೊಬೇಕು. ಆದ್ರೆ, ಇತ ನಾಯಿಕದ್ದ ಕಳ್ಳ ಅಂತ ಗೊತ್ತಾಗಿದ್ದೇ, ತನ್ನ ಕೈ ಚಳಕ ತೋರಿಸಿದ ಮೇಲೆ. ಇದನ್ನೂ ಓದಿ: 5 ದಿನ ಕಳೆದ್ರೂ ಬೋನಿಗೆ ಬೀಳದೇ ಚಿರತೆ ಕಳ್ಳಾಟ- ರೋಡ್ ಬಿಟ್ಟು ಮನೆಯಂಗಳದಲ್ಲಿಯೇ ಪ್ರತ್ಯಕ್ಷಮನೆಯಿಂದ ಹೊರ ಬಂದಿದ್ದ ಶ್ವಾನಕ್ಕೆ ಬಿಸ್ಕತ್ ತಿನ್ನಿಸಿ, ಬೈಕ್ ಹತ್ತಿಸಲು ಈ ಕಳ್ಳ ಪ್ರಯತ್ನಿಸಿದ್ದಾನೆ. ಬೈಕ್ ಹತ್ತದೇ ಇದ್ದಾಗ, ಕೈಯಲ್ಲೇ ಎತ್ಕೊಂಡು ಹೋಗಿದ್ದಾನೆ. 38 ಕೆ.ಜಿ ತೂಕವಿರುವ, ಒಂದುವರೆ ವರ್ಷದ ಗೋಲ್ಡನ್ ರಿಟ್ರೀವರ್ ತಳಿಯ ನಾಯಿಯನ್ನು ಖದೀಮ ಕದ್ದು ಎಸ್ಕೇಪ್ ಆಗಿದ್ದಾನೆ. ಬಿಆರ್ ಲೇಔಟ್‍ನ ಎ2ಬಿ ಹತ್ರ ಈ ಶ್ವಾನ ಕಾಣೆಯಾಗಿತ್ತು. ಸಿಸಿಟಿವಿಗಳನ್ನು ಪರಿಶೀಲಿಸಿದ ಬಳಿಕ ಅಸಲಿ ಸತ್ಯ ಗೊತ್ತಾಗಿದೆ. ಇದೀಗ ಘಟನೆ ಬಳಿಕ ಶ್ವಾನದ ಮಾಲೀಕ ಮಾರತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಕುಷ್ಟರೋಗ ನಿಯಂತ್ರಣಾಧಿಕಾರಿ ಸಾವಿನ ಸುತ್ತ ಅನುಮಾನ- ತಲೆಯಲ್ಲಿ ಹೊಕ್ಕಿದ ಗುಂಡಿನಿಂದ ಕೇಸ್‍ಗೆ ಟ್ವಿಸ್ಟ್
Sign in to your account
Username or Email Address


Password

 Remember Me


