ಬೆಂಗಳೂರು: ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹಾಗೂ ಅಶ್ವಥ್ ನಾರಾಯಣ್ (Ashwath Narayan) ಅವರು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನ ಸಿದ್ರಾಮುಲ್ಲಾ ಖಾನ್ ಎಂದು ವ್ಯಂಗ್ಯವಾಡಿರುವುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.26/11 ಮುಂಬೈ ದಾಳಿಯಲ್ಲಿ ಸಾರ್ವಜನಿಕರ ಪ್ರಾಣ ಉಳಿಸಲು ಪ್ರಾಣಾರ್ಪಣೆ ಮಾಡಿದ ಮೇಜರ್ ಸಂದೀಪ್‌ ಉನ್ನಿಕೃಷ್ಣನ್‌‌ರವರ ವೀರಗಾಥೆಯುಳ್ಳ “ಕರಾಳ ರಾತ್ರಿ” ಪಾಠವನ್ನು ಕೈಬಿಟ್ಟವರು ತಾವು. ರಾಷ್ಟ್ರೀಯತೆಯ ಪರಮ ವಿರೋಧಿ @siddaramaiah, ಹೀಗಿರುವಾಗ ತಮ್ಮನ್ನು ಸಿದ್ರಾಮುಲ್ಲಾ ಖಾನ್‌ ಎಂದು ಕರೆಯದೆ ಬೇರೆ ಬಿರುದು ಕೊಟ್ಟಾರೆಯೇ?7/8— BJP Karnataka (@BJP4Karnataka) December 5, 2022ಸಿದ್ರಾಮುಲ್ಲಾ ಖಾನ್ (Siddramulla Khan) ಹೇಳಿಕೆಯಿಂದ ಕುರುಬ ಸಮುದಾಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಆದರೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವ ಸಿ.ಟಿ ರವಿ ಅವರು, ಸಿದ್ರಾಮುಲ್ಲಾ ಖಾನ್ ಜನರೇ ನೀಡಿರುವ ಬಿರುದು, ಈ ಹೇಳಿಕೆ ಕಾಂಗ್ರೆಸ್ಸಿಗರಿಗೆ ಇಷ್ಟು ಉರಿಯುತ್ತೆ ಅಂದಿದ್ರೆ 10 ವರ್ಷದ ಮೊದಲೇ ಹೇಳ್ತಿದ್ದೆ ಎಂದು ಲೇವಡಿ ಮಾಡಿದ್ದಾರೆ.ಈ ಬೆನ್ನಲ್ಲೇ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿರುವ ಮುಸ್ಲಿಂ ಸಂಘಟನೆ ಸಿ.ಟಿ ರವಿ ಹಾಗೂ ಅಶ್ವಥ್ ನಾರಾಯಣ್ ಅವರನ್ನ ಕ್ಷಮೆ ಕೋರುವಂತೆ ಒತ್ತಾಯಿಸಿದೆ. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್‌ ಬಿರುದು ನಾವಲ್ಲ, ಜನರೇ ನೀಡಿದ್ದಾರೆ – ಸಿದ್ದುಗೆ ಬಿಜೆಪಿ ಟಾಂಗ್‌
ಮುಸ್ಲಿಂ ಸಂಘಟನೆಯ ಪ್ರಮುಖ ಸಾಧಿಕ್ ಪಾಷಾ ಮಾತನಾಡಿದ್ದು, ಬಿಜೆಪಿ ನಾಯಕರ ಮಾತುಗಳು ಮುಸ್ಲಿಂ ಮುಖಂಡರನ್ನು (Muslim Leaders) ಕೆರಳಿಸಿದೆ. ಈ ಹೇಳಿಕೆಗಳು ನಮಾಜ್ ಓದಿಸುವ ಮುಲ್ಲಾಗಳಿಗೆ ಮಾಡಿರುವ ಅವಮಾನ ಎಂದು ಕಿಡಿಕಾರಿದ್ದಾರೆ. ದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಹೇಳಿಕೆಯಿಂದ ಇಷ್ಟು ಉರಿಯುತ್ತೆ ಅಂದಿದ್ರೆ 10 ವರ್ಷದ ಮೊದಲೇ ಹೇಳ್ತಿದ್ದೆ – CT ರವಿಸಿ.ಟಿ ರವಿ ಅಶ್ವಥ್ ನಾರಾಯಣ್ ಬಹಿರಂಗವಾಗಿ ಕ್ಷಮೆ ಕೇಳದೇ ಇದ್ರೆ ಕೋರ್ಟ್ (Court) ಮೆಟ್ಟಿಲೇರೋದಾಗಿ ಮುಸ್ಲಿಂ ಸಂಘಟನೆ ಎಚ್ಚರಿಕೆ ನೀಡಿದೆ. ಮುಸ್ಲಿಂ ಧರ್ಮದ ಹೆಸರನ್ನು ಇವರ ರಾಜಕೀಯಕ್ಕೆ ಎಳೆದು ತರೋದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Sign in to your account
Username or Email Address


Password

 Remember Me


