ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ (Cooker Bomb Blast) ದ ಉಗ್ರ ಶಾರೀಕ್‍ನ ತನಿಖೆ ಮುಂದುವರಿಸಿದ ಎನ್‍ಐಎ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿಗಳು ಸಿಕ್ತಿದೆ. ಆತನ ಹಣದ ಮೂಲ ಜಾಲಾಡಿದ ಅಧಿಕಾರಿಗಳಿಗೆ ಶಾಕ್ ಆಗಿದ್ದು, ಹೆಚ್ಚಿನ ಹಣ (Money) ಡಾಲರ್ ಮೂಲಕ ಅಕೌಂಟ್‍ಗೆ ಬರುತ್ತಿದ್ದ ದಾಖಲೆ ಸಿಕ್ಕಿದೆ.ಉಗ್ರ ಮಹಮ್ಮದ್ ಶಾರೀಕ್‍ (Shariq) ನ ಒಂದೊಂದೇ ಉಗ್ರ ಕೃತ್ಯಗಳು ಬೆಳಕಿಗೆ ಬರುತ್ತಿದೆ. ಆತನ ಉಗ್ರ ಕೃತ್ಯಕ್ಕೆ ವಿದೇಶದಿಂದ ಸಹಕಾರ ಮಾಡುತ್ತಿದ್ದವರು ಡಾಲರ್ ಮೂಲಕ ಆರ್ಥಿಕ ಸಹಾಯ ನೀಡುತ್ತಿರುವ ಬಗ್ಗೆ ಎನ್‍ಐಎ (NIA) ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ನನ್ನು ಎನ್‍ಐಎ ಅಧಿಕಾರಿಗಳು ನಿರಂತರ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಆತನ ಹಣದ ಮೂಲವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆತನ ಡಾರ್ಕ್ ವೆಬ್‍ನಲ್ಲಿರುವ ಅಕೌಂಟ್‍ಗೆ ಡಾಲರ್ ನಲ್ಲಿ ಸಾಕಷ್ಟು ಹಣ ಬಂದಿರೋ ದಾಖಲೆ ಲಭ್ಯವಾಗಿದ್ದು, ಅಧಿಕಾರಿಗಳು ಅದರ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ – ಅಧಿಕೃತವಾಗಿ ಎನ್‌ಐಎ ತನಿಖೆಗೆ ಹಸ್ತಾಂತರಡಾರ್ಕ್ ವೆಬ್‍ನಲ್ಲಿರುವ ಶಾರೀಕ್ ಅಕೌಂಟ್‍ಗೆ ಲಕ್ಷಾಂತರ ಮೌಲ್ಯದ ಡಾಲರ್ ಡೆಪೋಸಿಟ್ ಆಗಿದೆ. ಬಳಿಕ ಅದನ್ನು ಆತ ಭಾರತೀಯ ಕರೆನ್ಸಿಯಾಗಿ ವರ್ಗಾಯಿಸುತ್ತಿದ್ದ. ಆ ಭಾರತೀಯ ಕರೆನ್ಸಿಯನ್ನು ತನ್ನ ಪರಿಚಯಿಸ್ಥರ ಅಕೌಂಟ್‍ಗೆ ಹಾಕಿಸಿ ಅದನ್ನು ಉಪಯೋಗಿಸುತ್ತಿದ್ದ. ಮೈಸೂರಿನಲ್ಲಿ ತಾನೊಬ್ಬ ಹಿಂದೂ ಎಂದು ಹೇಳಿಕೊಂಡು ಸಾಕಷ್ಟು ಜನರನ್ನು ಪರಿಚಯ ಮಾಡಿಕೊಂಡಿದ್ದು ಅವರ ಅಕೌಂಟ್‍ಗೆ ಹಣ ವರ್ಗಾವಣೆ ಮಾಡುತ್ತಿದ್ದ. ಸುಮಾರು 100ಕ್ಕೂ ಅಧಿಕ ಮೈಸೂರಿಗರ ಅಕೌಂಟ್ ಹಣ ವರ್ಗಾವಣೆಯಾಗಿದ್ದು, ಎನ್‍ಐಎ ಅಧಿಕಾರಿಗಳು 40 ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ. ಈತನ ಕೃತ್ಯ ತಿಳಿಯದೇ ಇದ್ದ ಸಾಕಷ್ಟು ಜನ ಈತನ ಸ್ನೇಹವನ್ನು ನಂಬಿ ಅಕೌಂಟ್‍ಗೆ ಹಣ ಹಾಕಿ ಶಾರೀಕ್ ಹೇಳಿದ ಬೇರೆ ಬೇರೆ ಅಕೌಂಟ್‍ಗೆ ವರ್ಗಾಯಿಸುತ್ತಿದ್ದರು.ಮೈಸೂರು ಮಾತ್ರವಲ್ಲದೆ ನೆರೆಯ ತಮಿಳುನಾಡು, ಕೇರಳ, ಮಧ್ಯ ಪ್ರದೇಶ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಅಕೌಂಟ್‍ಗೂ ಈತನ ಹಣ ವರ್ಗಾವಣೆ ಆಗಿದೆ. ಹೀಗಾಗಿ ಎನ್‍ಐಎ ಅಧಿಕಾರಿಗಳು ಈ ಎಲ್ಲಾ ರಾಜ್ಯದಲ್ಲೂ ತನಿಖೆ ಆರಂಭಿಸಿದ್ದು ಉಗ್ರನ ಜಾಲ ಇಡೀ ದೇಶದಲ್ಲೇ ಪಸರಿಸಿದ ಆತಂಕ ಎದುರಾಗಿದೆ.
Sign in to your account
Username or Email Address


Password

 Remember Me


