ಹಾಲಿವುಡ್‌ನ (Hollywood) ಬಹುನಿರೀಕ್ಷಿತ `ಅವತಾರ್ 2′ (Avatar 2) ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಅವತಾರ್ ಪಾರ್ಟ್ ಒನ್‌, 2009ರಲ್ಲಿ ಕಮಾಲ್ ಮಾಡಿತ್ತು. ಈಗ ಮತ್ತೆ `ಅವತಾರ್ 2′ ಮೂಲಕ ಮೋಡಿ ಮಾಡಲು ಸಜ್ಜಾಗಿದೆ. ಟಿಕೆಟ್‌ನ ದರ ದುಬಾರಿಯಾಗಿದ್ದರೂ ಕೂಡ 2 ಕೋಟಿ ಟಿಕೆಟ್ ಸೋಲ್ಡ್ ಔಟ್ ಆಗಿದೆ.ಜೇಮ್ಸ್ ಕ್ಯಾಮರಾನ್ ನಿರ್ದೇಶನದ `ಅವತಾರ್ 2′ (Avatar 2 Film) ರಿಲೀಸ್‌ಗೂ ಮುನ್ನವೇ ಚಿತ್ರದ ಮೇಲೆ ಸಿನಿರಸಿಕರಿಗೆ ಭಾರಿ ನಿರೀಕ್ಷೆ ಹುಟ್ಟಿಸಿದೆ. ಡಿಸೆಂಬರ್ 16ರಂದು ವಿಶ್ವಾದ್ಯಂತ ಏಕಕಾಲದಲ್ಲಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಕನ್ನಡ ಭಾಷೆಯಲ್ಲೂ ಸಿನಿಮಾ ತೆರೆಗೆ ಬರಲಿದೆ. ಇನ್ನೂ ಟಿಕೆಟ್ ದರ 1500 ರೂ. ಅಧಿಕ ಬೆಲೆ ಇದ್ದರೂ ಕೂಡ 2 ಕೋಟಿ ಟಿಕೆಟ್ಸ್ ಅಡ್ವಾನ್ಸ್ ಆಗಿ ಬುಕ್ ಆಗಿರೋದು ವಿಶೇಷ. ಇದನ್ನೂ ಓದಿ: ರೂಪೇಶ್ ಶೆಟ್ಟಿ ಮನೆಯಿಂದ ಮದುವೆ ಪ್ರಪೋಸಲ್ ಬಂದರೆ ಸಾನ್ಯ ಉತ್ತರವೇನು?ಸದ್ಯ ಈ ಚಿತ್ರದ ಟ್ರೈಲರ್, ಪೋಸ್ಟರ್ ಮೂಲಕ ಮೋಡಿ ಮಾಡಿದೆ. ಹಾಗಾಗಿ ʻಅವತಾರ್ 2ʼ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ‌ʻಅವತಾರ್ʼ ಭಾಗ 1ಕ್ಕಿಂತ ಪಾರ್ಟ್ 2 ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.
Sign in to your account
Username or Email Address


Password

 Remember Me


