ದೊಡ್ಮನೆಯ ಕುಡಿ ಯುವರಾಜ್‌ಕುಮಾರ್(Yuvarajkumar) ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ. ಯುವನ ಪಟ್ಟಾಭಿಷೇಕಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಯುವನ ನಾಯಕಿ ಯಾರು ಎಂಬುದರರ ಬಗ್ಗೆ ಭಾರಿ ಚರ್ಚೆ ಕೂಡ ನಡೆಯುತ್ತಿದೆ. ಅದಕ್ಕೆಲ್ಲ ಉತ್ತರ ಕೂಡ ಇದೀಗ ಸಿಕ್ಕಿದೆ.ಸಂತೋಷ್ ಆನಂದ್‌ರಾಮ್ (Santhosh Anandram) ಮತ್ತು ಯುವ ಕಾಮಬಿನೇಷನ್ ಚಿತ್ರ ಅನೌನ್ಸ್ ಆದ ದಿನದಿಂದ ಒಂದಲ್ಲಾ ಒಂದು ವಿವಾರವಾಗಿ ಸುದ್ದಿಯಾಗುತ್ತಲೇ ಇದೆ. ಮುಂದಿನ ಜನವರಿಯಿಂದ ಯುವನ ಡೆಬ್ಯೂ ಸಿನಿಮಾ ಶೂಟಿಂಗ್‌ಗೆ ತಯಾರಿ ನಡೆಯುತ್ತಿದ್ದು, ಯುವನಿಗೆ ಉಪೇಂದ್ರ (Upendra) ಅವರ ಮಗಳು ಐಶ್ವರ್ಯ, ಸುಧಾರಾಣಿ (Sudharani) ಮಗಳು ನಿಧಿ ಎಂದು ಸುದ್ದಿಯಾಗಿತ್ತು. ಇದೀಗ ಈ ಇಬ್ಬರು ಸ್ಟಾರ್ ಕಿಡ್ಸ್ ಯುವನಿಗೆ ನಾಯಕಿನಾ ಎಂಬ ಪ್ರಶ್ನೆ ಉತ್ತರ ಸಿಕ್ಕಿದೆ.ಉಪೇಂದ್ರ ಅವರ ಮಗಳು ಐಶ್ವರ್ಯ ಈಗಾಗಲೇ ದೇವಕಿ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸುಧಾರಾಣಿ ಮಗಳು ನಿಧಿಗೆ ನಟನೆಯ ಬಗ್ಗೆ ಆಸಕ್ತಿ ಇದ್ಯಾ ಎಂಬುದು ತಿಳಿದು ಬಂದಿಲ್ಲ. ಇದೀಗ ಚಿತ್ರತಂಡದಿಂದ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಐಶ್ವರ್ಯಾ ಮತ್ತು ನಿಧಿ ಇಬ್ಬರು ಯುವನಿಗೆ ನಾಯಕಿಯರಾಗಿ ನಟಿಸುತ್ತಿಲ್ಲ ಎಂಬ ಸ್ಪಷ್ಟನೆ ಸಿಕ್ಕಿದೆ. ಇದು ಸುಳ್ಳು ಸುದ್ದಿ ಎಂದು ಖಾತ್ರಿಯಾಗಿದೆ. ಇದನ್ನೂ ಓದಿ: ರೂಪೇಶ್ ಶೆಟ್ಟಿ ವಿಚಾರವಾಗಿ, ಬಿಗ್ ಬಾಸ್ ವಿರುದ್ಧ ಸಾನ್ಯ ಅಯ್ಯರ್ ಗರಂ  A post shared by Dr.Sudharani (@sudharanigovardhan)ಸದ್ಯದಲ್ಲಿ ಹೊಂಬಾಳೆ ಬ್ಯಾನರ್, ಯುವ ಚಿತ್ರದ ಕುರಿತಾದ ವಿಚಾರವನ್ನ ಅಧಿಕೃತವಾಗಿ ತಿಳಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಹೊಸ ಅಪ್‌ಡೇಟ್‌ಯೊಂದನ್ನ ಚಿತ್ರತಂಡ ರಿವೀಲ್ ಮಾಡಲಿದೆ.
Sign in to your account
Username or Email Address


Password

 Remember Me


