ಬೆಂಗಳೂರು: ರೌಡಿಗಳನ್ನು (Rowdy Sheeter) ರೌಡಿಗಳೆನ್ನಬೇಡಿ – ಇದು ಮಾಜಿ ರೌಡಿ ಶೀಟರ್ ಸಿ.ಟಿ ರವಿ (C.T Ravi) ಫಾರ್ಮಾನು! ರೌಡಿ ಮೋರ್ಚಾದ ತಯಾರಿ ನಡೆಸಿರುವ ಬಿಜೆಪಿ (BJP) ಈಗ ರೌಡಿಗಳ ಪರವಾಗಿ ನಿರ್ಲಜ್ಜವಾಗಿ ಸಮರ್ಥನೆಗೆ ಇಳಿದಿದೆ. ತಾವೂ ರೌಡಿಗಳಾಗಿದ್ದೆವು ಎಂಬುದನ್ನೂ ಒಪ್ಪುತ್ತಿದ್ದಾರೆ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ (Congress), ಶಾಸಕ ಸಿ.ಟಿ ರವಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಲೇವಡಿ ಮಾಡಿದೆ.ಟ್ವೀಟ್‍ನಲ್ಲಿ ಏನಿದೆ?:
ಬಿಜೆಪಿ ರೌಡಿ ಮೋರ್ಚಾ ಸೇರಲು ಬೇಡಿಕೆ ಹೆಚ್ಚುತ್ತಿದೆ! ಒಬ್ಬರ ಮೇಲೆ ಒಬ್ಬರಂತೆ ಬಿಜೆಪಿ ನಾಯಕರು ರೌಡಿಗಳ ಸಮರ್ಥನೆಗೆ ಇಳಿದಿರುವಾಗ ರೌಡಿಗಳಿಗೂ ಬಿಜೆಪಿ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿದೆ. ಬಿಜೆಪಿ ಅವರೇ ರೌಡಿ ಮೋರ್ಚಾದ ಉದ್ಘಾಟನೆ ಯಾವಾಗ? ಉದ್ಘಾಟನೆಗೆ ಅಮಿತ್ ಶಾ ಬರುವರೇ, ಅಥವಾ ಬೊಮ್ಮಾಯಿಯವರೇ ಟೇಪ್ ಕಟ್ ಮಾಡುತ್ತಾರಾ? ಇದನ್ನೂ ಓದಿ: ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ರಾಮುಲು ಗೈರು- ಮುರಿದು ಬಿತ್ತಾ ದಶಕಗಳ ಗೆಳೆತನದ ನಂಟು..?ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಆಶಯಗಳನ್ನು ಮುಗಿಸಲೆಂದೇ ಬಿಜೆಪಿ ರೌಡಿ ಮೋರ್ಚಾ ಕಟ್ಟುತ್ತಿದೆ. ಸಾಂವಿಧಾನಿಕ ಆಶಯದ ಮಾದರಿಯಲ್ಲಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಮುಂದಾಗಿದೆ ಬಿಜೆಪಿಯ ರೌಡಿ ಮೋರ್ಚಾ ಪಡೆ. ಇಂತಹ ಹಲ್ಲೆಗಳನ್ನು ಹೆಚ್ಚಿಸಲೆಂದೇ ರೌಡಿ ಮೋರ್ಚಾ ಕಟ್ಟುತ್ತಿದ್ದೀರಾ? ಇದನ್ನೂ ಓದಿ: JOIN CFI ಗೋಡೆ ಬರಹ- ಶಿರಾಳಕೊಪ್ಪದ 9ಕ್ಕೂ ಹೆಚ್ಚು ಕಡೆ ಕೃತ್ಯಬಿಜೆಪಿ ರೌಡಿ ಮೋರ್ಚಾ ಸೇರಲು ಬೇಡಿಕೆ ಹೆಚ್ಚುತ್ತಿದೆ!ಒಬ್ಬರ ಮೇಲೆ ಒಬ್ಬರಂತೆ ಬಿಜೆಪಿ ನಾಯಕರು ರೌಡಿಗಳ ಸಮರ್ಥನೆಗೆ ಇಳಿದಿರುವಾಗ ರೌಡಿಗಳಿಗೂ ಬಿಜೆಪಿ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿದೆ.@BJP4Karnataka,ರೌಡಿ ಮೋರ್ಚಾದ ಉದ್ಘಾಟನೆ ಯಾವಾಗ?ಉದ್ಘಾಟನೆಗೆ ಅಮಿತ್ ಶಾ ಬರುವರೇ, ಅಥವಾ ಬೊಮ್ಮಾಯಿಯವರೇ ಟೇಪ್ ಕಟ್ ಮಾಡುತ್ತಾರಾ?! pic.twitter.com/FE6eGGLhcj— Karnataka Congress (@INCKarnataka) December 4, 2022“ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ” ಇದು ಬಿಜೆಪಿಯ ಹೊಸ ಧ್ಯೇಯವಾಕ್ಯ. ಪರೋಡಿಗಳಿಂದ ರೌಡಿಗಳ ಸಮರ್ಥನೆ! ಬಿಜೆಪಿ ಸೇರಿದರೆ ಸಮಾಜಘಾತುಕರಿಗೂ ಸಮಾಜ ಸೇವಕರ ಬಿರುದು ನೀಡಲಾಗುತ್ತದೆ ಎಂಬುದಕ್ಕೆ ಪ್ರತಾಪ್ ಸಿಂಹ ಅವರ ರೌಡಿಗಳ ಪರ ಸಮರ್ಥನೆಯೇ ಸಾಕ್ಷಿ. ಕೊಲೆ, ಸುಲಿಗೆ, ದರೋಡೆ ಮಾಡಿದವರಿಗೆ ರೆಡ್ ಕಾರ್ಪೆಟ್ ಹಾಕುತ್ತಿರುವ ಬಿಜೆಪಿ ನಿರ್ಲಜ್ಜತನದ ಪರಮಾವಧಿಯನ್ನು ತಲುಪಿದೆ ಬಿಜೆಪಿಯ ಅಸಲಿ ಸಂಸ್ಕೃತಿ ಬೆತ್ತಲಾಗಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
Sign in to your account
Username or Email Address


Password

 Remember Me


