ಕಲಬುರಗಿ: ಶರಣ ಬಸವ ವಿಶ್ವವಿದ್ಯಾಲಯದಲ್ಲಿ(Sharana Basava University)ಶನಿವಾರ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು(Engineering Students)  ತಂದೆ ತಾಯಿಯ ಪಾದ ಪೂಜೆ(Pada-Puja) ಮಾಡಿದರು.ಈ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಅವರ ತಂದೆ ತಾಯಂದಿರು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು.ಮೋಟಿವೇಶನಲ್ ಸ್ಪೀಕರ್ ಸತೀಶ್ ಆರ್ ಅವರು ಮಕ್ಕಳಿಗೆ ಪಾದ ಪೂಜೆಯ ವಿಧಿವಿಧಾನಗಳನ್ನು ಹೇಳಿಕೊಟ್ಟರು ಹಾಗೂ ತಾಯಿಗೆ ‘ಮಮ್ಮಿ’ ಎನ್ನದೇ ʼಅಮ್ಮಾʼ ಎಂದು ಕರೆಯಬೇಕೆಂದು ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: ಮಂಗಳಗೌರಿ ಕಾವ್ಯಶ್ರೀ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್ವಿದ್ಯಾರ್ಥಿಗಳು ಮೊದಲಿಗೆ ತಮ್ಮ ತಂದೆ, ತಾಯಿಯವರ ಪಾದಗಳನ್ನು ತೊಳೆದು, ಕುಂಕುಮ ಹಚ್ಚಿ, ಪುಷ್ಪಗಳನ್ನಿಟ್ಟು, ಗಂಧದ ಕಡ್ಡಿಗಳಿಂದ ಬೆಳಗಿ, ಕರ್ಪೂರದಾರತಿ ಬೆಳಗಿ ಆಶೀರ್ವಾದ ಪಡೆದು ಪುನೀತರಾದರು.ಸತೀಶರವರು ಕ್ರಮವಾಗಿ ಮಂತ್ರ ಘೋಷಣೆ ಮಾಡಿ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.ಈ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನಿಲಕುಮಾರ್ ಬಿಡವೆ, ಡೀನ್ ಡಾ.ಲಕ್ಷೀ ಪಾಟೀಲ್ ಮಾಕಾ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
Sign in to your account
Username or Email Address


Password

 Remember Me


