ದಶದಿಕ್ಕುಗಳಲ್ಲೂ ಸೌಂಡ್ ಮಾಡುತ್ತಿರುವ ಸುದ್ದಿ ಏನಪ್ಪಾ ಅಂದ್ರೆ ಹರಿಪ್ರಿಯಾ(Haripriya) ಮತ್ತು ವಸಿಷ್ಠ ಸಿಂಹ (Vasista simha) ಜೋಡಿಯ ಮದುವೆ ಸುದ್ದಿ. ಎಲ್ಲರ ಊಹೆಗೂ ಮೀರಿ ಸೈಲೆಂಟ್ ಆಗಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಇಬ್ಬರು ಕಣ್ ಕಣ್ ಸಲಿಗೆ ಅಂತಾ ಡ್ಯುಯೆಟ್ ಮೂಡ್‌ನಲ್ಲಿದ್ದಾರೆ. ರೊಮ್ಯಾಂಟಿಕ್ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.ಸಾಕಷ್ಟು ಸಮಯದಿಂದ ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ನಿನ್ನೆಯಷ್ಟೇ ಗುರುಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸುವ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ್ದರು. ಬಳಿಕ ಎಂಗೇಜ್‌ಮೆಂಟ್(Engagement) ಫೋಟೋ ಔಟ್ ಆಗಿರುವ ಬೆನ್ನಲ್ಲೇ ದುಬೈನ(Dubai) ಮರುಭೂಮಿ ಪ್ರದೇಶದಲ್ಲಿ ತೆಗೆದ ತಮ್ಮ ರೊಮ್ಯಾಂಟಿಕ್ ಫೋಟೋವನ್ನ ಹಂಚಿಕೊಂಡಿದ್ದಾರೆ. ಕಣ್ ಕಣ್ ಸಲಿಗೆ ಅಂತಾ ಡ್ಯುಯೆಟ್ ಶುರು ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಯಶ್ ಮುಂದಿನ ಸಿನಿಮಾ, ಐರಾ ಪ್ರೊಡಕ್ಷನ್ ಹೌಸ್ ಬಗ್ಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್  A post shared by Hariprriya (@iamhariprriya)ಇತ್ತೀಚೆಗಷ್ಟೇ ಹರಿಪ್ರಿಯಾ, ವಸಿಷ್ಠ ಜೋಡಿ ದುಬೈಗೆ ಹಾರಿದ್ದರು. ಈ ವೇಳೆ ತೆಗೆದ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹೊಸ ಜೋಡಿಗೆ ಶುಭವಾಗಲಿ ಅಂತಾ ಫ್ಯಾನ್ಸ್ ಮನಸಾರೆ ಹಾರೈಸುತ್ತಿದ್ದಾರೆ.
Sign in to your account
Username or Email Address


Password

 Remember Me


