ರಜನೀಕಾಂತ್ (Rajanikanth) ಅಭಿಮಾನಿಗಳಿಗೆ ನಿಜಕ್ಕೂ ಇದು ಸಿಹಿ ಸುದ್ದಿ. ತಲೈವಾ ನಟನೆಯ `ಬಾಬಾ’ (Baba) ಸಿನಿಮಾ ಮತ್ತೆ ತೆರೆ ಬರಲು ಸಿದ್ಧವಾಗಿದೆ. ಚಿತ್ರವನ್ನು ಅಪ್‌ಗ್ರೇಡ್ ಮಾಡಿ, ತೆರೆಗೆ ತರಲಾಗುತ್ತಿದೆ. ಸದ್ಯ ಈ ಚಿತ್ರದ ಟ್ರೈಲರ್ ಹಂಚಿಕೊಂಡು, ಚಿತ್ರದ ಬಗ್ಗೆ ರಜನೀಕಾಂತ್ ಮೇಜರ್ ಅಪ್‌ಡೇಟ್ ಕೊಟ್ಟಿದ್ದಾರೆ.ತಲೈವಾ, ಮನಿಷಾ ಕೊಯಿರಾಲ ನಟನೆಯ `ಬಾಬಾ’ ಡಿಸೆಂಬರ್ 12ಕ್ಕೆ ತೆರೆಗೆ ಅಪ್ಪಳಿಸಲಿದೆ. ರಜನೀಕಾಂತ್ ಹುಟ್ಟುಹಬ್ಬದಂದೇ ಈ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಚಿತ್ರದ ಅಪ್‌ಡೇಟ್ ವರ್ಷನ್ ಮೂಲಕ ಮತ್ತೆ ತೆರೆಯ ಮೇಲೆ ಕಮಾಲ್ ಮಾಡಲು ರಜನೀಕಾಂತ್ ಸಜ್ಜಾಗಿದ್ದಾರೆ. ಸದ್ಯ ಸಿನಿಮಾ ಟ್ರೈಲರ್ ಹಂಚಿಕೊಂಡು, ನನ್ನ ಮನಸ್ಸಿಗೆ ಹತ್ತಿರವಾದ ಸಿನಿಮಾ `ಬಾಬಾ’ ಎಂದು ಟ್ವೀಟ್ಟರ್‌ನಲ್ಲಿ ನಟ ಬರೆದುಕೊಂಡಿದ್ದಾರೆ. ಇದನ್ನೂ ಓದಿ: Kantara ಸಂಘರ್ಷಕ್ಕೆ ತೆರೆ: `ವರಾಹರೂಪಂ’ ಹಾಡಿಗಿದ್ದ ಅಡಚಣೆ ನಿವಾರಣೆA film that will forever be closest to my heart … #Baba remastered version releasing soon ????????#BaBaReRelease https://t.co/vUaQahyHlA— Rajinikanth (@rajinikanth) December 3, 2022ಇಪ್ಪತ್ತು ವರ್ಷಗಳ ಹಿಂದೆ ತೆರೆಗೆ ಮೇಲೆ ಕಮಾಲ್ ಮಾಡೋದರಲ್ಲಿ ಬಾಬಾ ಸಿನಿಮಾ ಸೋತಿತ್ತು. ಈಗ `ಕಾಂತಾರ’ (Kantara Film) ಚಿತ್ರದ ಯಶಸ್ಸು ಚಿತ್ರದಲ್ಲಿನ ದೈವ ಶಕ್ತಿ ನೋಡಿ, `ಬಾಬಾ’ ಚಿತ್ರದ ರಿಲೀಸ್‌ಗೆ ತಲೈವಾ ಮನಸ್ಸು ಮಾಡಿದ್ದಾರೆ. `ಬಾಬಾ’ ಚಿತ್ರದ ದೈವ ಶಕ್ತಿಯ ಒಳಗೊಂಡ ಚಿತ್ರವಾಗಿದ್ದು, ಡಿ.12ರಂದು ತಮಿಳುನಾಡು ಸೇರಿದಂತೆ ರಾಜ್ಯದ ಎಲ್ಲೆಡೆ ಸಿನಿಮಾ ರಿಲೀಸ್ ಆಗುತ್ತಿದೆ.  A post shared by Rishab Shetty (@rishabshettyofficial)ಸಿನಿಮಾಗೆ ಹೊಸ ರೀತಿಯ ಕಲರ್ ಗ್ರೇಡಿಂಗ್, ಮತ್ತೊಮ್ಮೆ ರಜನೀಕಾಂತ್ ವಾಯ್ಸ್ ಡಬ್ಬಿಂಗ್ ಮಾಡಿ, ಭಿನ್ನವಾಗಿ ಅಭಿಮಾನಿಗಳ ಮನ ತಲುಪಲು ರೆಡಿಯಾಗಿದ್ದಾರೆ. 20 ವರ್ಷಗಳ ಹಿಂದೆ ಸೋತಿದ್ದ ಬಾಬಾ ಸಿನಿಮಾ ಇದೀಗ ಗೆಲ್ಲುತ್ತಾ, ಕಾಂತಾರ ಚಿತ್ರದ ಸ್ಪೂರ್ತಿ ಪಡೆದು ಮುನ್ನುಗ್ಗುತ್ತಿರುವ ತಲೈವಾ ಸಕ್ಸಸ್ ಸಿಗುತ್ತಾ ಎಂದು ಕಾದುನೋಡಬೇಕಿದೆ.
Sign in to your account
Username or Email Address


Password

 Remember Me


