ದೊಡ್ಮನೆಯ ಆಟಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರ. ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿರುವ ಮನೆಯಲ್ಲಿ ಮತ್ತೆ ಕಳಪೆ ಹಣೆಪಟ್ಟಿಯ ವಿಚಾರವಾಗಿ ಮನಸ್ತಾಪ ಶುರುವಾಗಿದೆ. ಮತ್ತೆ ಸಂಬರ್ಗಿಗೆ ಕಳಪೆ ಬೋರ್ಡ್ ಕೊಟ್ಟು ಜೈಲಿಗೆ ಮನೆಮಂದಿ ಅಟ್ಟಿದ್ದಾರೆ. ಅದಕ್ಕೆ ಸಂಬರ್ಗಿ ಕೂಡ ನಿಮಗೆ ಆತ್ಮಸಾಕ್ಷಿ ಇಲ್ವಾ ಎಂದು ಪ್ರಶ್ನಿಸಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ (Bigg Boss House)  ಇನ್ನೇನು 10 ವಾರಗಳು ಕಂಪ್ಲೀಟ್ ಆಗಲಿದೆ. ಇದೀಗ ವಾರಾಂತ್ಯದಲ್ಲಿ ಯಾರು ಉತ್ತಮ, ಕಳಪೆ ಎಂಬ ವಿಚಾರಕ್ಕೆ ಜಗಳ ಶುರುವಾಗಿದೆ. ಮನೆಯಲ್ಲಿ ಗ್ರೂಪಿಸಂ ಇದೆ. ಒಬ್ಬರು ಒಂದು ಹೆಸರನ್ನ ತೆಗೆದುಕೊಂಡರೆ, ಗುಂಪಿನ ಸದಸ್ಯರು ಅದೇ ಹೆಸರು, ಕಾರಣಗಳನ್ನ ಕಾಪಿ, ಪೇಸ್ಟ್ ಮಾಡ್ತಾರೆ ಎಂದು ಪ್ರಶಾಂತ್ ಸಂಬರ್ಗಿ ಆರೋಪ ಮಾಡಿದ್ದರು. ಇದೇ ವಿಚಾರದ ಕುರಿತಾಗಿ ಕಳೆದ ವಾರ ಕಿಚ್ಚ ಸುದೀಪ್ ಮುಂದೆಯೇ ಚರ್ಚೆ ನಡೆಯಿತು. ಈ ವಾರ ಮತ್ತೆ ಪ್ರಶಾಂತ್ ಸಂಬರ್ಗಿ ಕಳಪೆ ಪಟ್ಟ ಪಡೆದಿದ್ದಾರೆ. ರಾಕೇಶ್ ಅಡಿಗ (Rakesh Adiga) ಗ್ರೂಪ್ ಮತ್ತೆ ನನ್ನನ್ನ ಟಾರ್ಗೆಟ್ ಮಾಡಿದೆ ಎಂದು ಪ್ರಶಾಂತ್ ಸಂಬರಗಿ ಆರೋಪಿಸಿದ್ದಾರೆ. ಜೊತೆಗೆ ತಪ್ಪು ಮಾಡಿರೋರಿಗೆ ಆತ್ಮಸಾಕ್ಷಿ ಇಲ್ವಾ ಎಂದು ಸಂಬರ್ಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:`ಬಿಗ್ ಬಾಸ್’ ಖ್ಯಾತಿಯ ಕವಿತಾ ಗೌಡ -ಚಂದನ್ ಹೊಸ ಹೋಟೆಲ್ ಓಪನಿಂಗ್ಸಂಬರ್ಗಿ ಎರಡು ಬಾರಿ ತಪ್ಪು ಮಾಡಿದ್ದರು. ಅದರಿಂದ 20% ಬ್ಯಾಟರಿ ಮೈನಸ್ ಆಗಿತ್ತು. ಅಲ್ಲದೆ ಮನೆಯವರೊಂದಿಗೆ ಕಾಲ ಕಳೆಯಲು ಹೆಚ್ಚು ಬ್ಯಾಟರಿ ಯೂಸೇಜ್ ಮಾಡಿದ್ದರು ಎಂಬ ಕಾರಣಗಳನ್ನ ಕೊಟ್ಟು ಅಮೂಲ್ಯ, ರಾಕೇಶ್ ಅಡಿಗ, ಅನುಪಮಾ ಗೌಡ, ದಿವ್ಯಾ, ರೂಪೇಶ್ ಶೆಟ್ಟಿ ಹಾಗೂ ಅರುಣ್ ಸಾಗರ್, ಪ್ರಶಾಂತ್ ಅವರನ್ನ ಕಳಪೆ ಎಂದರು.10% ಬ್ಯಾಟರ್ ಡೌನ್ ಪ್ರಶಾಂತ್ ಅವರೇ ಮಾಡಿದ್ದಾರೆ ಅಂತ ಬಿಂಬಿಸುವ ದೃಷ್ಟಿಕೋನವೇ ದೊಡ್ಡ ಕಳಪೆ. ಅದಕ್ಕಿಂತಲೂ ಮುಂಚೆ ದಿವ್ಯಾ, ರಾಕೇಶ್, ಅರುಣ್ ಸಾಗರ್ ಟೈಮ್ ಮ್ಯಾನೇಜ್‌ಮೆಂಟ್ ಮಾಡದೆ ಬಿಗ್ ಬಾಸ್ ನಿಯಮವನ್ನ ಉಲ್ಲಂಘಿಸಿದ್ದರು. ಅದನ್ನ ಪ್ರಸ್ತಾಪ ಮಾಡದೆ ಕೇವಲ ಪರ್ಸನಲ್ ಆಗಿ ಅಟ್ಯಾಕ್ ಮಾಡುತ್ತಾರೆ ಅಮೂಲ್ಯ. ನಮ್ಮ ಮನಸ್ಥಿತಿಯನ್ನ ಎತ್ತಿ ಹಿಡಿಯೋದು ಅವರ ಜನ್ಮಸಿದ್ಧ ಹಕ್ಕು. ಪ್ರಶಾಂತ್ ಅಂದ್ರೆ ಕಳಪೆ ಎನ್ನುವ ಹಠಮಾರಿ ಧೋರಣೆಯನ್ನ ನಾವಿಲ್ಲಿ ಖಂಡಿಸಬೇಕು ಎಂದರು ಪ್ರಶಾಂತ್ ಸಂಬರ್ಗಿ ಕೊನೆಗೆ ಅತಿ ಹೆಚ್ಚು ಮತಗಳನ್ನ ಪಡೆದ ಅರುಣ್ ಸಾಗರ್ ಅತ್ಯುತ್ತಮ ಎನಿಸಿಕೊಂಡು ಬೆಸ್ಟ್ ಪರ್ಫಾಮೆನ್ಸ್ ಮೆಡಲ್ ಪಡೆದರು. ಇನ್ನೂ, ಕಳಪೆ ಪಟ್ಟ ಪಡೆದ ಪ್ರಶಾಂತ್ ಸಂಬರಗಿ ಜೈಲಿಗೆ ತೆರಳಿದರು. ಈ ಕಳಪೆ ವಿಚಾರವೇ ಇದೀಗ ಮನೆಯ ಕಲಹಕ್ಕೆ ಕಾರಣವಾಗಿದೆ.
Sign in to your account
Username or Email Address


Password

 Remember Me


