ಮೈಸೂರು: ನಾನೂ ರೌಡಿ, ಬಿಜೆಪಿ (BJP) ಪಕ್ಷದಲ್ಲಿ ನನಗೂ ಸ್ಥಾನ ನೀಡಿ ಎಂದು ಮಂಜು ಅಲಿಯಾಸ್ ಪಾನಿಪುರಿ ಮಂಜು ಎಂಬಾತ ಪ್ರತಿಭಟನೆ (Protest) ನಡೆಸಿದ್ದಾನೆ.ಮೈಸೂರಿನ (Mysuru) ನ್ಯಾಯಾಲಯದ ಮುಂದೆ ಗಾಂಧಿ ಪ್ರತಿಮೆ ಬಳಿ ಏಕಾಂಗಿ ಪ್ರತಿಭಟನೆ ನಡೆಸಿರುವ ರೌಡಿಶೀಟರ್ ಮಂಜು ಮೈಸೂರಿನ ಗಣೇಶ ನಗರ ನಿವಾಸಿಯಾಗಿದ್ದಾನೆ. ಈತ 2013ರಲ್ಲಿ 307ಕೇಸ್‍ನಲ್ಲಿ ಜೈಲು (Jail) ವಾಸ ಅನುಭವಿಸಿದ್ದ. ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ಹಾಗೂ ರೌಡಿ ಹಿನ್ನೆಲೆಯನ್ನು ಹೊಂದಿರುವವರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದರ ಬೆನ್ನಲ್ಲೇ ಈತ ಕೂಡ ನಾನು ರೌಡಿ, ನನಗೂ ಸ್ಥಾನ ಕೊಡಿ, ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ಒತ್ತಾಯಿಸಿದ್ದಾನೆ. ಇದನ್ನೂ ಓದಿ: ದಿವ್ಯಾಂಗ ಮಕ್ಕಳಿಗೆ 5 ಲಕ್ಷ ರೂ.ಗಳ ವಿಶೇಷ ಆರೋಗ್ಯ ವಿಮೆ ಘೋಷಿಸಿದ ಬೊಮ್ಮಾಯಿಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಿದ ರೌಡಿ ಶೀಟರ್ ಮಂಜುವನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಉದಯಗಿರಿ ಪೊಲೀಸರಿಗೆ ಮಂಜು ಹಸ್ತಾಂತರ ಮಾಡಿದ್ದಾರೆ. ಯಾವುದಾದರೂ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ:  ಕೇಸರಿ ಶಲ್ಯ ಹಾಕಿಕೊಂಡು ಸಿ.ಟಿ ರವಿ ಮನೆಗೆ ಮುತ್ತಿಗೆಗೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು
Sign in to your account
Username or Email Address


Password

 Remember Me


