ಕಲಬುರಗಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ಹೆಚ್ಚಾಗ್ತಿದೆ. ಇದೇ ವೇಳೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಬಿಜೆಪಿ ಮುಖಂಡ ಕೊಲೆ ಬೆದರಿಕೆಯ ಗಂಭೀರ ಆರೋಪ ಮಾಡಿದ್ದಾರೆ.ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಹತ್ಯೆಗೆ ಸಂಚು ಆರೋಪ ಕೇಳಿ ಬಂದಿದ್ದು, ಚಿತ್ತಾಪುರ ಬಿಜೆಪಿ (BJP) ಮುಖಂಡ ಮಣಿಕಂಠ ರಾಠೋಡ್ (Manikanta Rathod) ಆಡಿಯೋ ರಿಲೀಸ್ ಮಾಡಿದ್ದಾರೆ. ಜಮೀನು ವಿವಾದದಲ್ಲಿ ನನ್ನನ್ನು ಮುಗಿಸಲು ಪ್ಲಾನ್ ಮಾಡಿದ್ದಾರೆ ಎಂದು ರಾಠೋಡ್ ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಚಿರತೆ ಭೀತಿ; ಒಂಟಿಯಾಗಿ ಹೊರಗಡೆ ಓಡಾಡಬೇಡಿ – ವನ್ಯಜೀವಿ ತಜ್ಞರ ಎಚ್ಚರಿಕೆಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಣಿಕಂಠ ರಾಠೋಡ್, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಬಲಗೈ ಬಂಟರು ನನ್ನ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಾರೆ. ಅದಕ್ಕಾಗಿ ದೇಶಿ ನಿರ್ಮಿತ ಪಿಸ್ತೂಲ್ ನಿಂದ ನನ್ನನ್ನು ಕೊಲ್ಲಲು ಪ್ಲಾನ್‌ ಮಾಡಿದ್ದಾರೆ. ಕೊಲೆ ಮಾಡೋದಕ್ಕೆ 2 ದೇಶಿ ನಿರ್ಮಿತ ಪಿಸ್ತೂಲ್, 30 ಬುಲೆಟ್‌ಗಳನ್ನು ಖರೀದಿಸಿದ್ದಾರೆ. ಆದರೆ ದೇಶಿ ನಿರ್ಮಿತ ಪಿಸ್ತೂಲ್ ಮಾರಾಟ ಮಾಡಿದ್ದ ಆರೋಪಿಯನ್ನ ಬಂಧಿಸಿದ್ದ ಪೊಲೀಸರು, ಗನ್ ಕೇಸ್‌ನಲ್ಲಿ ಪ್ರಿಯಾಂಕ್ ಖರ್ಗೆ ಬೆಂಬಲಿಗರ ಹೆಸರು ತೆಗೆಯೋದಕ್ಕೆ ಡಿವೈಎಸ್‌ಪಿ 10 ಲಕ್ಷ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.ನನ್ನನ್ನು ಹತ್ಯೆ ಮಾಡೋದಕ್ಕೆ ಗುಪ್ತಚರ ಇಲಾಖೆಗೂ ಮಾಹಿತಿ ನೀಡಿ, ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ ಎಂದ ಅವರು, ಕೊಲೆ ಬೆದರಿಕೆ ಆಡಿಯೋ ರಿಲೀಸ್ ಮಾಡಿದ್ದಾರೆ. ಜೊತೆಗೆ ಕಲಬುರಗಿ ಪೊಲೀಸ್ ಕಮಿಷನರ್ ಎನ್.ರವಿಕುಮಾರ್ ಪತ್ನಿ ದಾಂಡಿಯಾ ನೈಟ್ ಹೆಸರಿನಲ್ಲಿ 3 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿರುವ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮುಸ್ಲಿಮರು ಎಲ್ಲ ಹಿಂದೂಗಳನ್ನ ಕೊಲ್ಲಬಹುದಿತ್ತು – ನಿವೃತ್ತ ಜಡ್ಜ್ ವಸಂತ ಮುಳಸಾವಳಗಿಕಲಬುರಗಿ ಪೊಲೀಸ್ ಆಯುಕ್ತರ ಪತ್ನಿ ರೂಪಾಲಿ ನಾಯ್ಕ ಅವರಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ದಾಂಡಿಯಾ ನೈಟ್ ಮಾಡುವುದಕ್ಕೆ ಹಣ ನೀಡಿ, ಇಲ್ಲವೇ ಗಡಿಪಾರು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ. ಕಮಿಷನರ್ ಪತ್ನಿ ಮಾತಾಡಿರುವ ಆಡಿಯೋ ಸಹ ಬಿಡುಗಡೆ ಮಾಡಿದ್ದಾರೆ.ಈ ಆರೋಪ ತಳ್ಳಿ ಹಾಕಿರುವ ಪೊಲೀಸ್ ಆಯುಕ್ತ ಎನ್.ರವಿಕುಮಾರ್ ದಾಂಡಿಯಾ ಕಾರ್ಯಕ್ರಮ ಮಾಡಿದ್ದು ನಿಜ ಆದರೆ ಹಣ ನೀಡಲೇಬೇಕು ಅಂತಾ ಡಿಮ್ಯಾಂಡ್ ಮಾಡಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.
Sign in to your account
Username or Email Address


Password

 Remember Me


