`ಕಾಂತಾರ’ (Kantara) ಯಶಸ್ಸಿನ ಅಲೆಯಲ್ಲಿ ರಿಷಬ್‌ (Rishab Shetty) ತೇಲುತ್ತಿದ್ದಾರೆ. ಇದೀಗ ಕಾರ್ಯಕ್ರಮದ ಅಂಗವಾಗಿ ಕಲಬುರಗಿಗೆ ಬಂದ ನಟನಿಗೆ ಫ್ಯಾನ್ಸ್ ಪ್ರೀತಿಯಿಂದ ಸ್ಟಾಗತಿಸಿದ್ದಾರೆ. ಈ ವೇಳೆ ʻವರಾಹ ರೂಪಂʼ ವಿವಾದದ ಬಗ್ಗೆ ರಿಷಬ್ ಪ್ರತಿಕ್ರಿಯಿಸಿದ್ದಾರೆ.ರಿಷಬ್ ಶೆಟ್ಟಿ ನಟನೆ, ನಿರ್ದೇಶನಕ್ಕೆ ಇಡೀ ದೇಶವೇ ತಲೆಬಾಗಿದೆ. ರಿಷಬ್ ಪ್ರತಿಭೆಯನ್ನ ಗುರುತಿ ಇಂದು ಕಲಬುರಗಿಯಲ್ಲಿ ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ನಟ ಮಾತನಾಡಿದ್ದಾರೆ. ಮಲಯಾಳಂನ ತೈಕ್ಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್‌ನವರು ಕಾಂತಾರ ಸಿನಿಮಾದ `ವರಾಹ ರೂಪಂ’ ಹಾಡಿನ ಮೇಲೆ ಕೃತಿಚೌರ್ಯ ಆರೋಪ ಮಾಡಿದ್ದಾರೆ. ಕಲಬುರಗಿಗೆ ಬಂದ ವೇಳೆ ಹಾಡಿನ ವಿವಾದದ ಬಗ್ಗೆ ಮಾತನಾಡಲು ರಿಷಬ್ ಶೆಟ್ಟಿ ನಿರಾಕರಿಸಿದ್ದಾರೆ. ಇದನ್ನೂ ಓದಿ: ಮುಂದುವರಿದ ಸಂಘರ್ಷ -‘ಕಾಂತಾರʼ ಪರ ತೀರ್ಪು ನೀಡಿದ್ದ ಜಿಲ್ಲಾ ಕೋರ್ಟ್‌ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆಹಾಡಿನ ವಿಚಾರ ಕೋರ್ಟ್‌ನಲ್ಲಿ ಇದೆ. ಅಲ್ಲಿಂದ ಬಂದಾಗಲೇ ಮಾತನಾಡಬೇಕು. ಅದರ ಬಗ್ಗೆ ನಾವು ಇಲ್ಲಿ ಮಾತನಾಡಬಾರದು ಎಂದು ಕಾಂತಾರ ಹೀರೋ ರಿಷಬ್ ಮಾತನಾಡಿದ್ದಾರೆ. ಒಟಿಟಿಯಲ್ಲಿ ‘ಕಾಂತಾರ’ ಪ್ರಸಾರ ಆಗುತ್ತಿದ್ದು, ಅದರಲ್ಲಿ `ವರಾಹ ರೂಪಂ’ ಹಾಡು ಬದಲಾಗಿರುವುದಕ್ಕೆ ಅನೇಕ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.`ಕಾಂತಾರ 2′ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಟೈಮ್ ಬಂದಾಗ ಕಾಂತಾರ ಪಾರ್ಟ್ 2 ಚಿತ್ರ ಬರುತ್ತದೆ. ಅದರ ಬಗ್ಗೆ ಆಗಲೇ ಹೇಳುತ್ತೇವೆ. ಆ ಕುರಿತು ಈಗ ಯಾವುದೇ ಆಲೋಚನೆ ಇಲ್ಲ ಎಂದು ಅವರು ಹೇಳಿದ್ದಾರೆ
Sign in to your account
Username or Email Address


Password

 Remember Me


