ಶಿವಮೊಗ್ಗ : ಖಾಸಗಿ ಆಸ್ಪತ್ರೆ ವೈದ್ಯರೊಬ್ಬರು (Doctor) ತಮ್ಮ ನಿವಾಸದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಗೋಪಾಲಗೌಡ ಬಡಾವಣೆಯಲ್ಲಿ ನಡೆದಿದೆ.ಮೃತ ವೈದ್ಯನನ್ನು ಡಾ.ಲೋಲಿತ್ ಎಂದು ಗುರುತಿಸಲಾಗಿದೆ. ಡಾ.ಲೋಲಿತ್ ನಗರದ ಖಾಸಗಿ ಆಸ್ಪತ್ರೆಯಲ್ಲಿ (Hospital) ಮೂಳೆ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಅಷ್ಟೇ ಅಲ್ಲದೇ ಮೃತ ವೈದ್ಯ ಲೋಲಿತ್ ಪತ್ನಿ ಸಹ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಕಿವಿಯ ಉದ್ದನೆಯ ಕೂದಲಿಗಾಗಿ ಗಿನ್ನಿಸ್ ವರ್ಲ್ಡ್‌ ದಾಖಲೆ ಬರೆದ ನಿವೃತ್ತ ಶಿಕ್ಷಕಡಾ.ಲೋಲಿತ್ ಕಳೆದ ಹಲವು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಮನನೊಂದು ಲೋಲಿತ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಾಯಿ ಮರಿಗೆ ನೀರು ಕುಡಿಸಲು ಹೋದ ಯೋಧ ಅಪಘಾತದಲ್ಲಿ ಸಾವು- ಹುಟ್ಟೂರಿನಲ್ಲಿ ನೆರವೇರಿದ ಅಂತ್ಯಕ್ರಿಯೆ
Sign in to your account
Username or Email Address


Password

 Remember Me


