ಮಂಡ್ಯ: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು 3 ಮಕ್ಕಳಿಗೆ ಅನ್ನದಲ್ಲಿ ವಿಷ ಉಣಿಸಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ.ಮದ್ದೂರಿನ ಹೊಳೆಬೀದಿಯಲ್ಲಿ ವಾಸವಿದ್ದ ಉಸ್ನಾ ಕೌಸರ್ (30) ತನ್ನ ಮೂರು ಮಕ್ಕಳಿಗೆ ವಿಷ ಹಾಕಿ ಕೊಂದು ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾರಿಸ್ (7), ಆಲಿಸಾ (4) ಅನಮ್ ಫಾತಿಮಾ (2) ಎಂಬ ಮೂರು ಮಕ್ಕಳು ಮೃತರಾಗಿದ್ದಾರೆ. ಇದನ್ನೂ ಓದಿ: ಈಗ ರಾಗಿಗುಡ್ಡ ಆಂಜನೇಯಸ್ವಾಮಿ ಜಾತ್ರೆಯಲ್ಲೂ ವ್ಯಾಪಾರ ದಂಗಲ್‌ಉಸ್ನಾ ಕೌಸರ್‌ ಗಂಡ ಅಖಿಲ್ ಅಹಮದ್ ಅಕ್ರಮ ಸಂಬಂಧಕ್ಕೆ ಬೇಸತ್ತು ಕೌಸರ್‌ ಈ ಕೃತ್ಯ ಮಾಡಿದ್ದಾಳೆ ಎನ್ನಲಾಗಿದೆ. ಚನ್ನಪಟ್ಟಣದಲ್ಲಿ ಕಾರ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಅಖಿಲ್ ಅಹಮದ್ ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇದಕ್ಕೆ ಪೂರಕ ಎಂಬಂತೆ ಅಖಿಲ್ ಮೊಬೈಲ್‌ನಲ್ಲಿ ಕೌಸರ್‌ಗೆ ಪರ ಸ್ತ್ರೀಯ ಬೆತ್ತಲೆ ಫೋಟೋ ಹಾಗೂ ಆಕೆಯ ಜೊತೆ ಅಖಿಲ್ ಅಹಮದ್ ಇದ್ದ ಫೋಟೋಗಳು ಪತ್ತೆಯಾಗಿವೆ.ಇದನ್ನು ಪ್ರಶ್ನೆ ಮಾಡಿದ್ದ ಕೌಸರ್, ಇದೇ ವಿಚಾರಕ್ಕೆ ಮನೆಯಲ್ಲಿ ಜೋರು ಗಲಾಟೆಯೂ‌ ಸಹ ನಡೆದಿದೆ. ನಂತರ ಇಬ್ಬರನ್ನು ಪೋಷಕರು ರಾಜಿ ಮಾಡಿದ್ದು, ಅಕ್ರಮ ಸಂಬಂಧ ಬಿಡುವುದಾಗಿ‌ ಅಖಿಲ್ ಹೇಳಿದ್ದ. ನಿನ್ನೆ ಉರುಫ್ ಹಿನ್ನೆಲೆ ಕೆಲಸ ಮುಗಿಸಿ ಬೇಗಾ ಮನೆಗೆ ಬರ್ತೀನಿ ಎಂದು ಕೆಲಸಕ್ಕೆ‌ ಅಖಿಲ್ ಹೋಗಿದ್ದ. ಸಂಜೆ ಆತ ಮನೆಗೆ ಬೇಗ ಬಾರದಿದ್ದಾಗ ಕಾಸರ್ ಫೋನ್ ಸಹ ಮಾಡಿದ್ದು, ಈ ವೇಳೆ ಇಬ್ಬರ ನಡುವೆ ಫೋನ್‌ನಲ್ಲಿ ಮತ್ತೆ ಜಗಳವಾಗಿದೆ. ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕೌಸರ್ ಮನೆಗೆ ಬಂದು ಅನ್ನದಲ್ಲಿ ಮಕ್ಕಳಿಗೆ ವಿಷ ಕಲಸಿ ತಿನ್ನಿಸಿ ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜಿಲ್ಲ: ಬೊಮ್ಮಾಯಿಇನ್ನೂ ಈ ನಾಲ್ವರನ್ನು ಅಖಿಲ್ ಅಹಮದ್ ಕೊಲೆ ಮಾಡಿದ್ದಾನೆ ಎಂದು ಕೌಸರ್ ಪೋಷಕರು ಆರೋಪ ಮಾಡಿದ್ದು, ಸದ್ಯ ಅಖಿಲ್ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಸದ್ಯ ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದವರ ಹುಡುಕಾಟದಲ್ಲಿದ್ದು, ಪ್ರಕರಣ ಸತ್ಯಾಸತ್ಯತೆಯನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Sign in to your account
Username or Email Address


Password

 Remember Me


