ಮಂಡ್ಯ: ಗಂಧದ ಮರ (Sandalwood) ಕಡಿಯುತ್ತಿದ್ದವರನ್ನು ಹಿಡಿಯಲು ಅರಣ್ಯಾಧಿಕಾರಿಗಳು (Forest Officer) ಗಾಳಿಯಲ್ಲಿ ಫೈರಿಂಗ್ (Firing) ಮಾಡಿದ್ದು, ಈ ವೇಳೆ ಗಂಧಚೋರರು ಅರಣ್ಯ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರದ ಎಚ್.ಎನ್ ಕಾವಲ್ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.ಬುಧವಾರ ಸಂಜೆ ನಾಗಮಂಗಲ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹಾಸನ ಮೂಲದ ಗೋವಿಂದಪ್ಪ ಹಾಗೂ ಆತನ ಮಕ್ಕಳಾದ ಶಂಕರ್ ಮತ್ತು ಕುಮಾರ್ ಗಂಧದ ಮರ ಕಡಿಯಲು ಬಂದಿದ್ದಾರೆ. ಈ ವೇಳೆ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಇತಿಹಾಸದಲ್ಲೇ ಫಸ್ಟ್ ಟೈಮ್ ಎಸ್‍ಪಿ ರೋಡ್ ಬಂದ್ – ಡಿ.13ಕ್ಕೆ ವಿಧಾನಸೌಧಕ್ಕೆ ವರ್ತಕರ ಮೆರವಣಿಗೆಅರಣ್ಯ ಇಲಾಖೆ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಮರಗಳ್ಳರನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಸಾಕಯ್ಯ ಅವರ ಮೇಲೆ ಮರಗಳ್ಳರು ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಅಧಿಕಾರಿಗಳು ಮತ್ತೊಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ಸಾವುಈ ವೇಳೆ ಗೋವಿಂದಪ್ಪನಿಗೆ ಗುಂಡಿನ ಚೂರುಗಳು ತಗುಲಿ ಗಾಯಗಳಾಗಿವೆ. ಮತ್ತಿಬ್ಬರು ಆರೋಪಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗಾಯಾಳುಗಳಾದ ಅರಣ್ಯ ಸಿಬ್ಬಂದಿ ಸಾಕಯ್ಯ ಹಾಗೂ ಗುಂಡಿನ ಚೂರುಗಳಿಂದ ಗಾಯಗೊಂಡ ಆರೋಪಿ ಗೋವಿಂದಪ್ಪನಿಗೆ ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Sign in to your account
Username or Email Address


Password

 Remember Me


